Total Pageviews

Monday, March 30, 2015

ರಾಮ ದೇವರೊ ಅಲ್ಲವೋ ನಂಗೂ ಗೊತ್ತಿಲ್ಲ!! ಆದರೇ ....
-ಡಾ.ಅಭಿನಂದನ ಬಳ್ಳಾರಿ

ಎಲ್ಲೋ ಯು.ಆರ್ .ಅನಂತಮೂರ್ತಿಯವರ "ಋಜುವಾತು "ಬರಹದಲ್ಲಿ ಒದಿದ ನೆನಪು , ಭಾರತದ ನಾಗರೀಕತೆಯನ್ನು ಪೇಗನ್ ನಾಗರೀಕತೆ ಎನ್ನುತ್ತಾರೆ. ಪೇಗನ್ ಎಂದರೆ ಬಹುದೇವರಾಧನೆಯ ನಂಬಿಕೆಯುಳ್ಳ ನಾಗರೀಕತೆ . ೩ಕೋಟಿ ದೇವರಿದ್ದಾರೆ ಎಂದು ನಂಬುವ ನಮ್ಮದು ಅದೇ ನಾಗರೀಕತೆ . ದೈವ ಸಾಕ್ಷಾತ್ಕಾರ ಮಾಡಿಕೊಳ್ಳಲು ದಿನಕ್ಕೊಂದು ದೇವಸ್ಥಾನಗಳಿಗೆ ತೆರಳುವವರು ನಮ್ಮಲ್ಲಿದ್ದಾರೆ . ನಮಗೆ ಕಲ್ಲು ದೇವರು , ಮಣ್ಣಿನ ಹುತ್ತವೂ ದೇವರು , ಒಂದು ಬೇವು -ಅರಳಿ ಮರವೂ ಕೂಡ ದೇವರೆ. ನಾನು ಭಾರತದ ಧರ್ಮಗ್ರಂಥವನೆಲ್ಲಾ ಗೌರವಿಸುತ್ತೇನೆ , ಅವು ನಮಗೆ ಒಳ್ಳೆಯ ಸಂಸ್ಕೃತಿ ಕೊಟ್ಟಿವೆ ಆದರೆ , ಇಂಥಹ ಧರ್ಮಗ್ರ್ಂಥಗಳು ಅಸ್ಪ್ರಷ್ಯತೆಯನ್ನು ಹುಟ್ಟುಹಾಕಿವೆಯಲ್ಲ ಎನ್ನುವ ದುಗುಡ ಕೂಡ . ದೇವರನ್ನು ಅವನ ಅಸ್ತಿತ್ವವನ್ನು ತಿಳಿಯುತ್ತಲೆ ಹೋಗುತ್ತೇವೆ ಅದಕ್ಕೊಂದು ಅಂತ್ಯವಿಲ್ಲ , ಉತ್ಸವ , ಹಬ್ಬ , ಜಾತ್ರೆಬಂತಿದೆಂದರೆ ಖುಷಿಪಡುವವರ್ಯಾರಿಲ್ಲ ಹೇಳಿ ? ಅವೆಲ್ಲ ಭಾರತದ ಶ್ರೀಮಂತ ಸಂಸ್ಕೃತಿ ಆದರೇ ಇಂಥಹ ಸಂಭ್ರಮಗಳು ಕೇವಲ ದೇವರಾರ್ಚನೆಗೆ ಮೀಸಲಾಗುತಿರುವುದು ವಿಷಾದನೀಯ . ದೈವವನ್ನು ಅಲ್ಲಗಳೆಯಲು ನಾನು ಅತ್ಯಲ್ಪ ಆದರೇ ಜಾತ್ರೆ, ಹಬ್ಬದ ತಯಾರಿ ಮಾಡುವ ಮಾನವರನ್ನು ಅಸ್ಪ್ರಶ್ಯರು ಎಂದು ಅಲ್ಲಗಳೆಯುವ ಬ್ರಾಹ್ಮಣ್ಯವನ್ನು ನಾನು ಖಂಡಿಸುತ್ತೇನೆ. ಭೂಮಿಯನ್ನು ಅರಚಿ , ಅಗೆದು , ತೆಗೆದು ಮಾರಿ ತಿನ್ನುವ ಜನರಿಗಾಗಲೀ , ಹೆಣ್ಣನ್ನು ಗೌರವಿಸುತ್ತಲೆ ವೇಷ್ಯಾವಾಟಿಕೆಗೆ ತಳ್ಳುವ ಗೊಮುಖಗಳಿಗಾಗಲೀ , ಮಗಳನ್ನು ಕಾಮಿಸುವ ಅಪ್ಪನನ್ನಾಗಲೀ ಧಾರ್ಮಿಕ ನೆಲೆಗಟ್ಟಿನಲ್ಲಿ ಸಮರ್ಥಿಸುವುದು ಹೇಯ. ರಾಮನ ಬಗ್ಗೆ ನನಗೆ ಗೊತ್ತಿಲ್ಲ ಆದರೇ ರಾಮಯಣವಂತೂ ನಮಗೆ ಒಳ್ಳೆಯ ಮಾರ್ಗದರ್ಶಕ ಗ್ರಂಥವಾಗಲಾರದು . ಈಗಂತೂ ಓಟಿಗಾಗಿ ಗೋ ರಕ್ಷಣೆ ಮತ್ತು ಧರ್ಮಸಮ್ಮೇಳನ ನಡೆಸುತ್ತಿರುವವರು ರಾಮಾಯಣದ ಮಾರ್ಗದರ್ಶನದಲ್ಲಿ ಬೆಳೆದಿರಬಹುದೆಂಬ ಊಹೆ ನನ್ನಲ್ಲಿ ಉಂಟಾಗುತ್ತದೆ . ಕ್ರೌರ್ಯವನ್ನು ಹುಟ್ಟುಹಾಕಿದ ರಾಮಾಯಣದ ಬಗ್ಗೆ ಹೆಚ್ಚು ನಿಂದಿಸದೆ ವೇದ-ಉಪನಿಷತ್ತುಗಳಲ್ಲಿ ಅಡಗಿರುವ ಪರಮಾರ್ಥ ಸತ್ಯದ ಅರಿವನ್ನು ಪಡೆಯೋಣ , ಹಾಗೂ ಕೆಟ್ಟದನ್ನು ನಿರಾಕರಿಸಿ , ಒಳ್ಳೆಯದನ್ನು ಸ್ವೀಕರಿಸೋಣ . "ಅನೋ ಭದ್ರಾ: ಕೃತವೋ ಯಂತು ವಿಶ್ವತ:"  ಭಾರತಕ್ಕೆ ಶಾಂತಿಯ ಅಗತ್ಯವಿದೆ , ನಮ್ಮೆಲ್ಲರ ಮನಸ್ಸುಗಳು ತಿಳಿಗೊಳ್ಳುವ ಅವಶ್ಯಕತೆ ಇದೆ ಎಂದು ಪ್ರಸ್ತುತದಲ್ಲಿ ಬಾಳಲು ಪ್ರಯತ್ನಿಸೋಣ.