Total Pageviews

Monday, August 31, 2015

ಸಂದಿಗ್ಢದ ನೆರಳಿನಲ್ಲಿ ಭಾರತ :

ಸಂದಿಗ್ಢದ ನೆರಳಿನಲ್ಲಿ ಭಾರತ :
- ಪ್ರೊ.ಅಭಿನಂದನ ಬಳ್ಳಾರಿ 

ಬದುಕಿನಲ್ಲಿ ನಾವು ಮಾಡುತ್ತಿರುವುದೆಲ್ಲವೂ ಆನಂದದ ಗುರಿಯೆಡೆಗೆ ಎಂದು ನಾವು ತಿಳಿದಾಗ ಬದುಕು ಆನಂದ ಹುಟ್ಟುಹಾಕುವ ಉದ್ಯಮವೋ ಎನೋ ಎಂದೆನಿಸುತ್ತದೆ. ಜೀವನವು ಆನಂದವನ್ನು ಅನ್ವೇಷಿಸುತ್ತ ಸಾಗುತ್ತಿರುವಾಗಲೇ ಈ ಆನಂದವನ್ನು ಮುಚ್ಚುಹಾಕುವತ್ತ ಕೆಲವು ಅಸಹನೆಯಿಂದ ಕೂಡಿರುವ ಶಕ್ತಿಗಳು ಪ್ರಯತ್ನಿಸುತ್ತವೆ. ನಾವು ಚಿಂತಾರಹಿತವಾಗಿ ನಿತ್ಯತೃಪ್ತರಾಗಿದ್ದಾಗಲೇ ಈ ಬದುಕು ಸರಳ. ನಮ್ಮ ಜೀವನವನ್ನು ಮತ್ತೊಬ್ಬ ಜೀವಿಗೆ ಅಡಚಣೆಯಾಗದಂತೆ ಪರರ ಹಿತ ಬಯಸುವುದರಿಂದಲೇ ಈ ಜೀವನದಲ್ಲಿ ಸಫಲತೆ , ಆನಂದ ಪಡೆಯಲು ಸಾಧ್ಯ. ಮನುಷ್ಯ ತನ್ನನ್ನು ತಾನು ವಿಂಗಡಿಸಿಕೊಂಡಿದ್ದಾನೆ . ಮನುಷ್ಯ ಮನುಷ್ಯನಲ್ಲಿ ತಾರತಮ್ಯವನ್ನು ಕಂಡುಹಿಡಿದಿದ್ದಾನೆ. ದೇವರಲ್ಲೂ ತಾರತಮ್ಯ ಸೃಷ್ಟಿಸಿ ದೇವರಲ್ಲಿಯೂ ೧,೨,೩ ಹೀಗೆ ಸ್ಥಾನಗಳನ್ನು ಸೃಷ್ಠಿಸಿದ್ದಾನೆ. ಧರ್ಮದ ಹೆಸರಲ್ಲಿ ಮಾನವೀಯ ಮೌಲ್ಯಗಳನ್ನು ಪಾಲಿಸದೇ ಕ್ರೌರ್ಯದ ಭಾವನೆಗಳ ಜೊತೆ ಹೊಂದಿಕೊಂಡು ಜೀವನ ನಡೆಸುತ್ತಿದ್ದಾನೆ. ಸಂಘಜೀವಿಯಾಗದೇ "ಸಂಘ"ದ ಜೀವಿಯಾಗಿ ಬದಲಾಗುತ್ತಿರುವ ಮಾನವ ಸೌಮ್ಯತೆಯನ್ನು ಕಳೆದುಕೊಂಡು ಹುಚ್ಚನಾಗಿದ್ದಾನೆ. ’ಶಿಸ್ತು’ ಎನ್ನುವ ಪದ ಮಾನವ ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿರುವುದು ಮಾನವನ ದುರಾಸೆ ಮತ್ತು ಅಹಂಕಾರಕ್ಕೆ ಅಲಂಕಾರಗಳಾಗಿದೆ. ಇದಕ್ಕೆ ಉತ್ತಮ ಉದಾಹರಣೆ ನಮ್ಮ ದೇಶದ ಜನ ತುಂಬಾ ಅಭಿಮಾನದಿಂದ ... ಸಾರಿ ..ಪೂರ್ವಾಗ್ರಹದಿಂದ ಆರಿಸಿರುವ ನಾಯಕ ನರೇಂದ್ರ ಮೋದಿ . ಆತನ ಉದ್ದೇಶಗಳನ್ನು ಅರ್ಥಮಾಡಿಕೊಳ್ಳಲಾಗದ ಸ್ಥಿತಿಯಲ್ಲಿ ಈ ದೇಶದ ಜನರನ್ನು ತಂದು ನಿಲ್ಲಿಸಿದ್ದಾನೆ ಮಹಾಪುರುಷ. 

ಈತನನ್ನೆ ಏಕೆ ಆಯ್ಕೆ ಮಾಡಿದಿರಿ ಎನ್ನುವ ಪ್ರಶ್ನೆಯನ್ನು ನಮ್ಮ ಜನರಲ್ಲಿಟ್ಟಾಗ ಅವರು ಆಯ್ಕೆಗಳ ಬಗ್ಗೆ ಮಾತನಾಡಿ ಮೋದಿಯನ್ನು ಉತ್ತಮ ಆಯ್ಕೆ ಎನ್ನುತ್ತಾರಲ್ಲದೆ ಜೊತೆಗೆ ರಾಹುಲ್ ಗಾಂಧಿಯನ್ನು ಕತ್ತೆಗೆ ಹೋಲಿಸಿ ಅಮುಲ್ ಬೇಬಿ ಎಂದೆಲ್ಲ ಹಂಗಿಸಿ ಹಾಸ್ಯಮಾಡುತ್ತಾರೆ . ಈ ಜನರಿಗೆಲ್ಲ ಒಂದು ವಿಷಯ ತಿಳಿಯಬೇಕಾಗಿದೆ ಮೂರ್ಖರಾದವರೆಲ್ಲ ಅನುಪಯುಕ್ತರೇನಲ್ಲ . ಒಬ್ಬ ತೀವ್ರವಾದಿಯನ್ನು ಆಯ್ಕೆಮಾಡುವುದಕ್ಕಿಂತ , ಒಬ್ಬ ಸೌಮ್ಯವಾದಿಯನ್ನು ಆಯ್ಕೆಮಾಡುವುದು ಲೇಸಾಗಿತ್ತು .
                  ಜನರ ಭೌತಿಕ ಅವಶ್ಯಕತೆಗಳಿಗೆ ಒತ್ತು ನೀಡಿ ನಿಧಾನವಾಗಿಯೇ ತಮ್ಮ ಉದ್ದೇಶಗಳನ್ನು ಪೂರ್ಣಗೊಳಿಸುವ ಮೋದಿಯಂತಹ ಆರ್ ಎಸ್ ಎಸ್ ನ ಮಾದರಿ ನಾಯಕ ಈ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಯ ಆನಂದವನ್ನು ಕಿತ್ತುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ . ನಾನು ಮೋದಿ ಸರ್ಕಾರದ ಭ್ರಷ್ಟಾಚಾರದ ಕುರಿತಾಗಿಯೋ ಅಥವಾ ಆತನ ಖಾಸಗಿ ವಿಚಾರಗಳ ಕುರಿತಾಗಿಯೋ ಪ್ರಾಮುಖ್ಯತೆ ವಹಿಸದೆ ಆತ ಪ್ರಬುದ್ಧನಾಗಿ ನಟಿಸುತ್ತ ಬುದ್ಧನ ಸಿದ್ಧಾಂತಕ್ಕೆ ಕೊಳ್ಳಿ ಇಡಲು ಹೊರಟಿರುವುದನ್ನು ಖಂಡಿಸುತ್ತೇನೆ . ದಲಿತರನ್ನು , ರೈತರನ್ನು ಷೋಷಿಸಿ , ಬಂಡವಾಳಶಾಹಿಗಳನ್ನು ಪೋಷಿಸುತ್ತಿರುವುದನ್ನು ಈ ದೇಶದ ಅಸಂಖ್ಯಾತ ವಿದ್ಯಾವಂತ-ವಿಚಾರವಂತರು ಖಂಡಿಸದೇ ಇರುವುದರ ಪರಿಣಾಮವನ್ನು ಎದುರಿಸಲೇಬೇಕಾಗುತ್ತದೆ ಎಂಬುದು ನನ್ನ ಕಳವಳ . ನೆನಪಿಡಬೇಕಾದ  ಅಂಶವೆಂದರೆ ಈ ದೇಶದ ಚುಕ್ಕಾಣಿ ಹಿಡಿದಿರುವ ಸ್ವಯಂಘೋಷಿತ "ವಿಕಾಸ ಪುರುಷ" , "ಅಭಿವೃದ್ಧಿ ಹರಿಕಾರ" , "ಪವಾಡ ಪುರುಷ"  ಈ ದೇಶದ ಯುವಜನರಲ್ಲಿ ಹಗಲು ಕನಸನ್ನು ಸೃಷ್ಟಿಸಿದ್ದಾನೆ. ವಿವೇಕಾನಂದರು "ಏಳಿ ಎದ್ದೇಳಿ " ಎಂದಾಗ ಎದ್ದೇಳದ ನಮ್ಮ ಜನರು ಮೋದಿಯ ಕರೆಗೆ ಓ ಕೊಟ್ಟು ಎದ್ದಿರುವುದನ್ನೆನಾದರೂ ಪ್ರಾಯಶ: ವಿವೇಕಾನಂದರು ನೋಡಿದ್ದರೆ ಮಲಗಿ ಎಂದು ಕರೆ ಕೊಡುತ್ತಿದ್ದರು . ಜನರನ್ನು ಧರ್ಮದ ಮೂಲಕ , ಸುಳ್ಳು ಭರವಸೆ ಮೂಲಕ , ವೇದ -ಶಾಸ್ತ್ರಗಳ ಮೂಲಕ , ಭಾವನಾತ್ಮಕ ಸೆಳೆತದ ಮೂಲಕ ವಂಚಿಸಿ ಆಡಳಿತ ಪಡೆದಿರುವ ಮೋದಿ ಜನರನ್ನು ಆಂತರಿಕವಾಗಿ ನಿಷ್ಕ್ರ್‍ಇಯೆಗೊಳಿಸಿದ್ದಾನೆ. ಯಾವಾಗ ಮನುಷ್ಯನ ಆಂತರಿಕ  ಬುದ್ಧಿ ನಿಷ್ಕ್ರ್‍ಇಯವಾಗುತ್ತದೋ , ಆಗ ಕ್ಲೇಶ ಸೃಷ್ಟಿಯಾಗುತ್ತದೆ . ಮೋದಿ ಇಂತಹ ಕ್ಲೇಶವನ್ನು ಸೃಷ್ಟಿಸಿದ್ದಾನೆ. ಆದರೆ , ಜನ ಕ್ಲೇಶಭರಿತರಾದಾಗ ಸೋಲುವುದಿಲ್ಲ , ಈಗೆಲ್ಲ ನಮ್ಮ ಜನ ಇನ್ನೂ ನಿರಾಸೆ ಬಿಡದೆ ಮೋದಿ ಎನೋ ಕಡೆದು ಗುಡ್ಡೆ ಹಾಕುತ್ತಾನೆಂದು ಹರ್ಷಭರಿತರಾಗಿದ್ದಾರಲ್ಲ , ಈಗ ನಮ್ಮ ಜನ ಸೋತಿದ್ದಾರೆ ಮತ್ತು ಮೋದಿ ಗೆದ್ದಿದ್ದಾನೆ . ಒಟ್ಟಿನಲ್ಲಿ ಭಾರತ ಸಂಧಿಗ್ಢತೆ ನೆರಳಿನಲ್ಲಿದೆ. 

ಮಾನವೀಯತೆಗೆ ನಿಕಟವಾಗಿದ್ದವರನ್ನು ಕೊಂದವರ ಧರ್ಮ ಅದೆಂಥಹ ಕಪಟ:

ಮಾನವೀಯತೆಗೆ ನಿಕಟವಾಗಿದ್ದವರನ್ನು ಕೊಂದವರ ಧರ್ಮ ಅದೆಂಥಹ ಕಪಟ:
-ಡಾ. ಅಭಿನಂದನ ಬಳ್ಳಾರಿ .
ಧರ್ಮವೆಂಬುದು ಮಾನವನ ವರ್ತನೆಯನ್ನು ಬದಲಿಸಿ ಆತನನ್ನು ಶುದ್ಧನನ್ನಾಗಿ ಮಾಡಬೇಕು . ಅದಾಗದಿದ್ದರೆ , ಮಾನವನನ್ನು ವೈರಾಗ್ಯವೆಂಬ ಮಾಯೆಗಾದರೂ ಕರೆದೊಯ್ಯಬೇಕು , ಇಲ್ಲವೊ ಹಾಳಾಗಿ ಹೋಗಲಿ ದೇವಸ್ಥಾನಗಳನ್ನು ಸೃಷ್ಟಿಸಿ ದುಡ್ಡು ದುಡಿಯುವ ಕೇಂದ್ರವನ್ನು ಸ್ಥಾಪಿಸಿ ಸಾಯಲಿ . ಆದರೇ , ಮಾನವೀಯ ಮೌಲ್ಯಗಳನ್ನು ಕಿತ್ತಿ , ಮನುಷ್ಯನಲ್ಲಿ ಭಾವುಕತೆಯೆ ಇಲ್ಲದಂತಾಗಿ ಮಾಡಿ ಕ್ರೌರ್ಯವನ್ನು ಉತ್ಪಾದಿಸುವ ವಸ್ತುವಾಗಬಾರದು .
...
ಬಸವಣ್ಣ ಮಾನವನ ಜೀವನ ಶೈಲಿಯನ್ನು ಉನ್ನತಗೊಳಿಸುವುದಕೆಂದೆ ವಚನಾದಿಗಳನ್ನು ರಚಿಸಿದ . ಗುಟ್ಟಾಗಿದ್ದ ಅದೆಷ್ಟೋ ರಟ್ಟುಗಳನ್ನು ಬಿಚ್ಚಿಡೂವಲ್ಲಿ ಆತನ ವಚನಗಳು ಸಾರ್ಥಕವಾದವು . ಮಾನವನನ್ನು ಅನೇಕ ಶೃಂಖಲೆಗಳಿಂದ ಬಿಡಿಸಲು ನೆರವಾದವು ವಚನಗಳು . ಇಂತಹ ವಚನಗಳನ್ನು ಅಧ್ಯಯಿಸಿ , ಸಂಶೋಧನೆಯಿಂದ ಸತ್ಯವನ್ನು ಅನ್ವೇಶಿಸುವ ಪ್ರತಿಜ್ಞೆಯನ್ನು ಮಾಡಿದ್ದ ಸಾಹಿತಿ ಡಾ. ಎಂ ಎಂ ಕಲಬುರ್ಗಿಯವರನ್ನು ಬರ್ಬರವಾಗಿ ಕೊಂದವರ ಧರ್ಮ ಮತ್ತು ಅದರ ತತ್ವಗಳು ಎಂಥಹವಿರಬೇಕು ? ಮಂಗಳಾರತಿ ಮಾಡುವಾಗ ಬಾರಿಸುವ ದೊಡ್ಡ ದೊಡ್ಡ ಘಂಟೆ, ಜಾಗಟೆಗಳಿಂದ ಈ ಧರ್ಮಾಂಧರನ್ನು ಶಿಕ್ಷಿಸಬೇಕೆ? ಅಥವಾ ಈ ಧರ್ಮವೆಂಬ ಹೆಣ್ಣಿನೊಂದಿಗೆ ಸದಾ ಮಲಗಿ ಆಕೆಯನ್ನು ಗರ್ಭಧರಿಸುವಂತೆ ಮಾಡಿ ಉಪ-ಧರ್ಮದ ಕುಡಿ,ಕಿಡಿಗಳನ್ನು ಹುಟ್ಟುಹಾಕಲು ನೆರವಾದ ಮಠಾಧಿಶರಿಗೂ , ಧರ್ಮಕ್ಕೊಂದು ಸೇನೆಯನ್ನು ಸೃಷ್ಟಿಸಿ ಕಾಯುತ್ತಿರುವ ಧರ್ಮದ ಭಂಟರಿಗೋ ಅವರು ಮಾಡುತ್ತಿರುವ ನೀಚ ಕೃತ್ಯತೋರಿಸಿ ಅವಮಾನಿಸಬೇಕೋ?
ಸಂಶೋಧನೆ ಮಾಡಲು ಬೇಕಾದ ಧ್ಯಾನ , ಧಾರಣ , ಸ್ಮರಣ , ಮನನ , ಅಧ್ಯಯನ , ಅನುಷ್ಠಾನ , ಸಿದ್ಧಿ ಹಂತಗಳನೆಲ್ಲ ತಮ್ಮಲ್ಲಿ ರೂಢಿಸಿಕೊಂಡು ಸಾಮಾಜಿಕ ಕೊಡುಗೆಯಾದಂತಹ ವಚನ ಸಾಹಿತ್ಯವನ್ನು ಪ್ರಸರಿಸುವ ಕಾರ್ಯ ಕೈಗೊಂಡವರನ್ನು ಕೊಲ್ಲು ಎಂದಿತೇ "ಪಂಚೇಂದ್ರಿಯವನ್ನು ಪಾಂಚಾಲಿಗೆ ಮಿಸಲಿಡು " ಎನ್ನುವ ಧರ್ಮ? ಮೆಲಿರೋರು ಮೇಲೆ , ಕೆಳಗಿರೋದು ಕೆಳಗೆ ಉಳಿಯೋ ಹಾಗೆ ಕೆಲಸ ಮಾಡುತ್ತಿರುವ ಧರ್ಮಗಳು ,ಸೃಷ್ಟಿಸುತ್ತಿರುವ ತಲ್ಲಣಗಳು , ಹುಟ್ಟುಹಾಕುತ್ತಿರುವ ಭೀತಿ-ಭ್ರಾಂತಿ, ಮೂಡಿಸುತ್ತಿರುವ ಸಂಕಟವೆಂಬ ಸಂಕೋಲೆಯಿಂದ ಹೊರಬರಲು ಸಾಧ್ಯವೇ? ಎನ್ನುವಂಥಹ ಪರಿಸ್ಥಿತಿ ಬಂದೊದಗಿದೆ .
ಹಿಂದೂ ಧರ್ಮದಲ್ಲಿನ ಅವೈಚಾರಿಕತೆ ವಾಸ್ತವವನ್ನು ಅಲ್ಲಗಳೆಯುತ್ತದೆ . ವಾಸ್ತವವನ್ನು ವಚನಗಳ ಮೂಲಕ ಅರ್ಥೈಸಿಕೊಳ್ಳಬಹುದು ಎಂದು ಪ್ರತಿಪಾದಿಸುತ್ತಿದ್ದ ; ಪರಿಸರವನ್ನು ಮಥಿಸಬಲ್ಲ ಕಡಗೋಲು ಒರಟಾಗಿರಬೇಕು ಎಂದು ತಮ್ಮನ್ನು ತಾವೇ ಎಲ್ಲ ರೀತಿಯ ಪ್ರತಿರೋಧಗಳಿಗೆ ಹೆದರದ ಜೀವಿಯನ್ನಾಗಿ ಮಾಡಿಕೊಂಡಿದ್ದ ಹಿರಿಯ ಜೀವ ಡಾ.ಎಂ.ಎಂ.ಕಲಬುರ್ಗಿಯನ್ನು ಕೊಂದದ್ದು ಯಾವುದೇ ಪಿಸ್ತೂಲಿನ ಗುಂಡುಗಳಲ್ಲ. ಹೊರತಾಗಿ ಅಸಮಾನತೆ, ಕ್ರೌರ್ಯ , ಮುಂತಾದ ತಾಮಸ ಪ್ರವೃತ್ತಿಯನ್ನು ಹುಟ್ಟಿಹಾಕುತ್ತಿರುವ ಪೂಜೆಯ ಮಂತ್ರಗಳು , ಜಾಗಟೆಯ ಶಬ್ಧ ಮತ್ತು ದುರ್ಗುಣ ಸಂಬೋಧಿಸುವ ’ಅಧರ್ಮ’ ಗ್ರಂಥ ಮಾನವನಿಗೆ ಅನವಶ್ಯಕವಾಗಿರುವ ಅಸೂಯೆ , ಲೋಭ , ರೋಷಗಳನ್ನು ಒಳಗೊಂಡು ಮತ್ತೊಂದು ಚರಿತ್ರೆ ಬರೆಸಲು ಹೊರಟಿದೆ. ಈ ಚರಿತ್ರೆಗೆ ಮೂಲವಾಗಿರುವುದು ಆ ಹಿಂದೂ ಧರ್ಮದ ದುರ್ಮಾರ್ಗ ಪ್ರೇರೆಪಿಸುವ ದುರ್ದರ್ಮಗ್ರಂಥ . ಎಂಗೆಲ್ಸ್ ಹೇಳಿದಂತೆ ಚರಿತ್ರೆ ಮುಂದುವರೆಯಲು ಕಾರಣವೇ "Evil passions of men " . ಇಂತಹ ಧರ್ಮದ ಸ್ವಭಾವ ಹುಡುಕಹೊರಟಿರುವ ಸಂಭ್ರಮದ ಅಗತ್ಯತೆಯನ್ನು ಕೊನೆಗಾಣಿಸಬೇಕು . ’ ಕಳಬೇಡ , ಕೊಲಬೇಡ ’ ಎನ್ನುವ ಮಾತನ್ನು ಹೇಳದ ಧರ್ಮಗ್ರಂಥಗಳನ್ನು ಅದರ ಮೂಲಕೃತಿಯೂ ಸಿಗದಂತೆ ಸುಟ್ಟುಹಾಕಬೇಕು . ಬ್ರಾಹ್ಮಣನಾದವ ಹೊಲೆಯರಾದವಳೊಂದಿಗೆ ಸಂಭೋಗಿಸಿ , ಹೊಲೆಯನಾದವ ಬ್ರಾಹ್ಮಣನಾದವಳು ಸ್ವಾಧಿಸಿ ಧರ್ಮವನ್ನು ಪುನರ್ ರಚಿಸಬೇಕು . ಬ್ರಾಹ್ಮಣ್ಯವನ್ನು ಬೇರು ಸಮೇತ ಕಿತ್ತು ಸಮಾಜದಲ್ಲಿನ ತಲ್ಲಣಾದಿಗಳನ್ನು ದೂರ ಮಾಡಬೇಕು . ಬ್ರಾಹ್ಮಣ್ಯದ ಪಿಸ್ತೂಲನ್ನು ಹಿಡಿದು ವಿಚಾರವಾದಿಗಳ ಕೊಂದವರ ಬೆರಳಚ್ಚನ್ನು ಕಂಡುಹಿಡಿಯುವುದು ಕಷ್ಟ . ಏಕೆಂದರೆ ಈಗ ಬ್ರಾಹ್ಮಣ್ಯದ ಪಿಸ್ತೂಲನ್ನು ಕೇವಲ ಬ್ರಾಹ್ಮಣರಷ್ಟೆ ಹಿಡಿದಿಲ್ಲ , ಅದನ್ನು ಏಲ್ಲ ವರ್ಗದವರು ಸಂಘಟನೆಯೊಂದರ ಮುಖೇನ ಹಿಡಿದಿದ್ದಾರೆ . ಆ ಸಂಘಟನೆಯನ್ನು ನಾಶಪಡಿಸುವಂತಾಗಲೆ ನಮ್ಮೆಲ್ಲಾ ವಿಚಾರವಾದಿಗಳು ಶಾಂತಿಯ ಮೂಲಕವಾದರೂ ಅಥವಾ ಕ್ರಾಂತಿಯ ಮೂಲಕವಾದರೂ.