Total Pageviews

Monday, August 31, 2015

ಸಂದಿಗ್ಢದ ನೆರಳಿನಲ್ಲಿ ಭಾರತ :

ಸಂದಿಗ್ಢದ ನೆರಳಿನಲ್ಲಿ ಭಾರತ :
- ಪ್ರೊ.ಅಭಿನಂದನ ಬಳ್ಳಾರಿ 

ಬದುಕಿನಲ್ಲಿ ನಾವು ಮಾಡುತ್ತಿರುವುದೆಲ್ಲವೂ ಆನಂದದ ಗುರಿಯೆಡೆಗೆ ಎಂದು ನಾವು ತಿಳಿದಾಗ ಬದುಕು ಆನಂದ ಹುಟ್ಟುಹಾಕುವ ಉದ್ಯಮವೋ ಎನೋ ಎಂದೆನಿಸುತ್ತದೆ. ಜೀವನವು ಆನಂದವನ್ನು ಅನ್ವೇಷಿಸುತ್ತ ಸಾಗುತ್ತಿರುವಾಗಲೇ ಈ ಆನಂದವನ್ನು ಮುಚ್ಚುಹಾಕುವತ್ತ ಕೆಲವು ಅಸಹನೆಯಿಂದ ಕೂಡಿರುವ ಶಕ್ತಿಗಳು ಪ್ರಯತ್ನಿಸುತ್ತವೆ. ನಾವು ಚಿಂತಾರಹಿತವಾಗಿ ನಿತ್ಯತೃಪ್ತರಾಗಿದ್ದಾಗಲೇ ಈ ಬದುಕು ಸರಳ. ನಮ್ಮ ಜೀವನವನ್ನು ಮತ್ತೊಬ್ಬ ಜೀವಿಗೆ ಅಡಚಣೆಯಾಗದಂತೆ ಪರರ ಹಿತ ಬಯಸುವುದರಿಂದಲೇ ಈ ಜೀವನದಲ್ಲಿ ಸಫಲತೆ , ಆನಂದ ಪಡೆಯಲು ಸಾಧ್ಯ. ಮನುಷ್ಯ ತನ್ನನ್ನು ತಾನು ವಿಂಗಡಿಸಿಕೊಂಡಿದ್ದಾನೆ . ಮನುಷ್ಯ ಮನುಷ್ಯನಲ್ಲಿ ತಾರತಮ್ಯವನ್ನು ಕಂಡುಹಿಡಿದಿದ್ದಾನೆ. ದೇವರಲ್ಲೂ ತಾರತಮ್ಯ ಸೃಷ್ಟಿಸಿ ದೇವರಲ್ಲಿಯೂ ೧,೨,೩ ಹೀಗೆ ಸ್ಥಾನಗಳನ್ನು ಸೃಷ್ಠಿಸಿದ್ದಾನೆ. ಧರ್ಮದ ಹೆಸರಲ್ಲಿ ಮಾನವೀಯ ಮೌಲ್ಯಗಳನ್ನು ಪಾಲಿಸದೇ ಕ್ರೌರ್ಯದ ಭಾವನೆಗಳ ಜೊತೆ ಹೊಂದಿಕೊಂಡು ಜೀವನ ನಡೆಸುತ್ತಿದ್ದಾನೆ. ಸಂಘಜೀವಿಯಾಗದೇ "ಸಂಘ"ದ ಜೀವಿಯಾಗಿ ಬದಲಾಗುತ್ತಿರುವ ಮಾನವ ಸೌಮ್ಯತೆಯನ್ನು ಕಳೆದುಕೊಂಡು ಹುಚ್ಚನಾಗಿದ್ದಾನೆ. ’ಶಿಸ್ತು’ ಎನ್ನುವ ಪದ ಮಾನವ ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿರುವುದು ಮಾನವನ ದುರಾಸೆ ಮತ್ತು ಅಹಂಕಾರಕ್ಕೆ ಅಲಂಕಾರಗಳಾಗಿದೆ. ಇದಕ್ಕೆ ಉತ್ತಮ ಉದಾಹರಣೆ ನಮ್ಮ ದೇಶದ ಜನ ತುಂಬಾ ಅಭಿಮಾನದಿಂದ ... ಸಾರಿ ..ಪೂರ್ವಾಗ್ರಹದಿಂದ ಆರಿಸಿರುವ ನಾಯಕ ನರೇಂದ್ರ ಮೋದಿ . ಆತನ ಉದ್ದೇಶಗಳನ್ನು ಅರ್ಥಮಾಡಿಕೊಳ್ಳಲಾಗದ ಸ್ಥಿತಿಯಲ್ಲಿ ಈ ದೇಶದ ಜನರನ್ನು ತಂದು ನಿಲ್ಲಿಸಿದ್ದಾನೆ ಮಹಾಪುರುಷ. 

ಈತನನ್ನೆ ಏಕೆ ಆಯ್ಕೆ ಮಾಡಿದಿರಿ ಎನ್ನುವ ಪ್ರಶ್ನೆಯನ್ನು ನಮ್ಮ ಜನರಲ್ಲಿಟ್ಟಾಗ ಅವರು ಆಯ್ಕೆಗಳ ಬಗ್ಗೆ ಮಾತನಾಡಿ ಮೋದಿಯನ್ನು ಉತ್ತಮ ಆಯ್ಕೆ ಎನ್ನುತ್ತಾರಲ್ಲದೆ ಜೊತೆಗೆ ರಾಹುಲ್ ಗಾಂಧಿಯನ್ನು ಕತ್ತೆಗೆ ಹೋಲಿಸಿ ಅಮುಲ್ ಬೇಬಿ ಎಂದೆಲ್ಲ ಹಂಗಿಸಿ ಹಾಸ್ಯಮಾಡುತ್ತಾರೆ . ಈ ಜನರಿಗೆಲ್ಲ ಒಂದು ವಿಷಯ ತಿಳಿಯಬೇಕಾಗಿದೆ ಮೂರ್ಖರಾದವರೆಲ್ಲ ಅನುಪಯುಕ್ತರೇನಲ್ಲ . ಒಬ್ಬ ತೀವ್ರವಾದಿಯನ್ನು ಆಯ್ಕೆಮಾಡುವುದಕ್ಕಿಂತ , ಒಬ್ಬ ಸೌಮ್ಯವಾದಿಯನ್ನು ಆಯ್ಕೆಮಾಡುವುದು ಲೇಸಾಗಿತ್ತು .
                  ಜನರ ಭೌತಿಕ ಅವಶ್ಯಕತೆಗಳಿಗೆ ಒತ್ತು ನೀಡಿ ನಿಧಾನವಾಗಿಯೇ ತಮ್ಮ ಉದ್ದೇಶಗಳನ್ನು ಪೂರ್ಣಗೊಳಿಸುವ ಮೋದಿಯಂತಹ ಆರ್ ಎಸ್ ಎಸ್ ನ ಮಾದರಿ ನಾಯಕ ಈ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಯ ಆನಂದವನ್ನು ಕಿತ್ತುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ . ನಾನು ಮೋದಿ ಸರ್ಕಾರದ ಭ್ರಷ್ಟಾಚಾರದ ಕುರಿತಾಗಿಯೋ ಅಥವಾ ಆತನ ಖಾಸಗಿ ವಿಚಾರಗಳ ಕುರಿತಾಗಿಯೋ ಪ್ರಾಮುಖ್ಯತೆ ವಹಿಸದೆ ಆತ ಪ್ರಬುದ್ಧನಾಗಿ ನಟಿಸುತ್ತ ಬುದ್ಧನ ಸಿದ್ಧಾಂತಕ್ಕೆ ಕೊಳ್ಳಿ ಇಡಲು ಹೊರಟಿರುವುದನ್ನು ಖಂಡಿಸುತ್ತೇನೆ . ದಲಿತರನ್ನು , ರೈತರನ್ನು ಷೋಷಿಸಿ , ಬಂಡವಾಳಶಾಹಿಗಳನ್ನು ಪೋಷಿಸುತ್ತಿರುವುದನ್ನು ಈ ದೇಶದ ಅಸಂಖ್ಯಾತ ವಿದ್ಯಾವಂತ-ವಿಚಾರವಂತರು ಖಂಡಿಸದೇ ಇರುವುದರ ಪರಿಣಾಮವನ್ನು ಎದುರಿಸಲೇಬೇಕಾಗುತ್ತದೆ ಎಂಬುದು ನನ್ನ ಕಳವಳ . ನೆನಪಿಡಬೇಕಾದ  ಅಂಶವೆಂದರೆ ಈ ದೇಶದ ಚುಕ್ಕಾಣಿ ಹಿಡಿದಿರುವ ಸ್ವಯಂಘೋಷಿತ "ವಿಕಾಸ ಪುರುಷ" , "ಅಭಿವೃದ್ಧಿ ಹರಿಕಾರ" , "ಪವಾಡ ಪುರುಷ"  ಈ ದೇಶದ ಯುವಜನರಲ್ಲಿ ಹಗಲು ಕನಸನ್ನು ಸೃಷ್ಟಿಸಿದ್ದಾನೆ. ವಿವೇಕಾನಂದರು "ಏಳಿ ಎದ್ದೇಳಿ " ಎಂದಾಗ ಎದ್ದೇಳದ ನಮ್ಮ ಜನರು ಮೋದಿಯ ಕರೆಗೆ ಓ ಕೊಟ್ಟು ಎದ್ದಿರುವುದನ್ನೆನಾದರೂ ಪ್ರಾಯಶ: ವಿವೇಕಾನಂದರು ನೋಡಿದ್ದರೆ ಮಲಗಿ ಎಂದು ಕರೆ ಕೊಡುತ್ತಿದ್ದರು . ಜನರನ್ನು ಧರ್ಮದ ಮೂಲಕ , ಸುಳ್ಳು ಭರವಸೆ ಮೂಲಕ , ವೇದ -ಶಾಸ್ತ್ರಗಳ ಮೂಲಕ , ಭಾವನಾತ್ಮಕ ಸೆಳೆತದ ಮೂಲಕ ವಂಚಿಸಿ ಆಡಳಿತ ಪಡೆದಿರುವ ಮೋದಿ ಜನರನ್ನು ಆಂತರಿಕವಾಗಿ ನಿಷ್ಕ್ರ್‍ಇಯೆಗೊಳಿಸಿದ್ದಾನೆ. ಯಾವಾಗ ಮನುಷ್ಯನ ಆಂತರಿಕ  ಬುದ್ಧಿ ನಿಷ್ಕ್ರ್‍ಇಯವಾಗುತ್ತದೋ , ಆಗ ಕ್ಲೇಶ ಸೃಷ್ಟಿಯಾಗುತ್ತದೆ . ಮೋದಿ ಇಂತಹ ಕ್ಲೇಶವನ್ನು ಸೃಷ್ಟಿಸಿದ್ದಾನೆ. ಆದರೆ , ಜನ ಕ್ಲೇಶಭರಿತರಾದಾಗ ಸೋಲುವುದಿಲ್ಲ , ಈಗೆಲ್ಲ ನಮ್ಮ ಜನ ಇನ್ನೂ ನಿರಾಸೆ ಬಿಡದೆ ಮೋದಿ ಎನೋ ಕಡೆದು ಗುಡ್ಡೆ ಹಾಕುತ್ತಾನೆಂದು ಹರ್ಷಭರಿತರಾಗಿದ್ದಾರಲ್ಲ , ಈಗ ನಮ್ಮ ಜನ ಸೋತಿದ್ದಾರೆ ಮತ್ತು ಮೋದಿ ಗೆದ್ದಿದ್ದಾನೆ . ಒಟ್ಟಿನಲ್ಲಿ ಭಾರತ ಸಂಧಿಗ್ಢತೆ ನೆರಳಿನಲ್ಲಿದೆ. 

ಮಾನವೀಯತೆಗೆ ನಿಕಟವಾಗಿದ್ದವರನ್ನು ಕೊಂದವರ ಧರ್ಮ ಅದೆಂಥಹ ಕಪಟ:

ಮಾನವೀಯತೆಗೆ ನಿಕಟವಾಗಿದ್ದವರನ್ನು ಕೊಂದವರ ಧರ್ಮ ಅದೆಂಥಹ ಕಪಟ:
-ಡಾ. ಅಭಿನಂದನ ಬಳ್ಳಾರಿ .
ಧರ್ಮವೆಂಬುದು ಮಾನವನ ವರ್ತನೆಯನ್ನು ಬದಲಿಸಿ ಆತನನ್ನು ಶುದ್ಧನನ್ನಾಗಿ ಮಾಡಬೇಕು . ಅದಾಗದಿದ್ದರೆ , ಮಾನವನನ್ನು ವೈರಾಗ್ಯವೆಂಬ ಮಾಯೆಗಾದರೂ ಕರೆದೊಯ್ಯಬೇಕು , ಇಲ್ಲವೊ ಹಾಳಾಗಿ ಹೋಗಲಿ ದೇವಸ್ಥಾನಗಳನ್ನು ಸೃಷ್ಟಿಸಿ ದುಡ್ಡು ದುಡಿಯುವ ಕೇಂದ್ರವನ್ನು ಸ್ಥಾಪಿಸಿ ಸಾಯಲಿ . ಆದರೇ , ಮಾನವೀಯ ಮೌಲ್ಯಗಳನ್ನು ಕಿತ್ತಿ , ಮನುಷ್ಯನಲ್ಲಿ ಭಾವುಕತೆಯೆ ಇಲ್ಲದಂತಾಗಿ ಮಾಡಿ ಕ್ರೌರ್ಯವನ್ನು ಉತ್ಪಾದಿಸುವ ವಸ್ತುವಾಗಬಾರದು .
...
ಬಸವಣ್ಣ ಮಾನವನ ಜೀವನ ಶೈಲಿಯನ್ನು ಉನ್ನತಗೊಳಿಸುವುದಕೆಂದೆ ವಚನಾದಿಗಳನ್ನು ರಚಿಸಿದ . ಗುಟ್ಟಾಗಿದ್ದ ಅದೆಷ್ಟೋ ರಟ್ಟುಗಳನ್ನು ಬಿಚ್ಚಿಡೂವಲ್ಲಿ ಆತನ ವಚನಗಳು ಸಾರ್ಥಕವಾದವು . ಮಾನವನನ್ನು ಅನೇಕ ಶೃಂಖಲೆಗಳಿಂದ ಬಿಡಿಸಲು ನೆರವಾದವು ವಚನಗಳು . ಇಂತಹ ವಚನಗಳನ್ನು ಅಧ್ಯಯಿಸಿ , ಸಂಶೋಧನೆಯಿಂದ ಸತ್ಯವನ್ನು ಅನ್ವೇಶಿಸುವ ಪ್ರತಿಜ್ಞೆಯನ್ನು ಮಾಡಿದ್ದ ಸಾಹಿತಿ ಡಾ. ಎಂ ಎಂ ಕಲಬುರ್ಗಿಯವರನ್ನು ಬರ್ಬರವಾಗಿ ಕೊಂದವರ ಧರ್ಮ ಮತ್ತು ಅದರ ತತ್ವಗಳು ಎಂಥಹವಿರಬೇಕು ? ಮಂಗಳಾರತಿ ಮಾಡುವಾಗ ಬಾರಿಸುವ ದೊಡ್ಡ ದೊಡ್ಡ ಘಂಟೆ, ಜಾಗಟೆಗಳಿಂದ ಈ ಧರ್ಮಾಂಧರನ್ನು ಶಿಕ್ಷಿಸಬೇಕೆ? ಅಥವಾ ಈ ಧರ್ಮವೆಂಬ ಹೆಣ್ಣಿನೊಂದಿಗೆ ಸದಾ ಮಲಗಿ ಆಕೆಯನ್ನು ಗರ್ಭಧರಿಸುವಂತೆ ಮಾಡಿ ಉಪ-ಧರ್ಮದ ಕುಡಿ,ಕಿಡಿಗಳನ್ನು ಹುಟ್ಟುಹಾಕಲು ನೆರವಾದ ಮಠಾಧಿಶರಿಗೂ , ಧರ್ಮಕ್ಕೊಂದು ಸೇನೆಯನ್ನು ಸೃಷ್ಟಿಸಿ ಕಾಯುತ್ತಿರುವ ಧರ್ಮದ ಭಂಟರಿಗೋ ಅವರು ಮಾಡುತ್ತಿರುವ ನೀಚ ಕೃತ್ಯತೋರಿಸಿ ಅವಮಾನಿಸಬೇಕೋ?
ಸಂಶೋಧನೆ ಮಾಡಲು ಬೇಕಾದ ಧ್ಯಾನ , ಧಾರಣ , ಸ್ಮರಣ , ಮನನ , ಅಧ್ಯಯನ , ಅನುಷ್ಠಾನ , ಸಿದ್ಧಿ ಹಂತಗಳನೆಲ್ಲ ತಮ್ಮಲ್ಲಿ ರೂಢಿಸಿಕೊಂಡು ಸಾಮಾಜಿಕ ಕೊಡುಗೆಯಾದಂತಹ ವಚನ ಸಾಹಿತ್ಯವನ್ನು ಪ್ರಸರಿಸುವ ಕಾರ್ಯ ಕೈಗೊಂಡವರನ್ನು ಕೊಲ್ಲು ಎಂದಿತೇ "ಪಂಚೇಂದ್ರಿಯವನ್ನು ಪಾಂಚಾಲಿಗೆ ಮಿಸಲಿಡು " ಎನ್ನುವ ಧರ್ಮ? ಮೆಲಿರೋರು ಮೇಲೆ , ಕೆಳಗಿರೋದು ಕೆಳಗೆ ಉಳಿಯೋ ಹಾಗೆ ಕೆಲಸ ಮಾಡುತ್ತಿರುವ ಧರ್ಮಗಳು ,ಸೃಷ್ಟಿಸುತ್ತಿರುವ ತಲ್ಲಣಗಳು , ಹುಟ್ಟುಹಾಕುತ್ತಿರುವ ಭೀತಿ-ಭ್ರಾಂತಿ, ಮೂಡಿಸುತ್ತಿರುವ ಸಂಕಟವೆಂಬ ಸಂಕೋಲೆಯಿಂದ ಹೊರಬರಲು ಸಾಧ್ಯವೇ? ಎನ್ನುವಂಥಹ ಪರಿಸ್ಥಿತಿ ಬಂದೊದಗಿದೆ .
ಹಿಂದೂ ಧರ್ಮದಲ್ಲಿನ ಅವೈಚಾರಿಕತೆ ವಾಸ್ತವವನ್ನು ಅಲ್ಲಗಳೆಯುತ್ತದೆ . ವಾಸ್ತವವನ್ನು ವಚನಗಳ ಮೂಲಕ ಅರ್ಥೈಸಿಕೊಳ್ಳಬಹುದು ಎಂದು ಪ್ರತಿಪಾದಿಸುತ್ತಿದ್ದ ; ಪರಿಸರವನ್ನು ಮಥಿಸಬಲ್ಲ ಕಡಗೋಲು ಒರಟಾಗಿರಬೇಕು ಎಂದು ತಮ್ಮನ್ನು ತಾವೇ ಎಲ್ಲ ರೀತಿಯ ಪ್ರತಿರೋಧಗಳಿಗೆ ಹೆದರದ ಜೀವಿಯನ್ನಾಗಿ ಮಾಡಿಕೊಂಡಿದ್ದ ಹಿರಿಯ ಜೀವ ಡಾ.ಎಂ.ಎಂ.ಕಲಬುರ್ಗಿಯನ್ನು ಕೊಂದದ್ದು ಯಾವುದೇ ಪಿಸ್ತೂಲಿನ ಗುಂಡುಗಳಲ್ಲ. ಹೊರತಾಗಿ ಅಸಮಾನತೆ, ಕ್ರೌರ್ಯ , ಮುಂತಾದ ತಾಮಸ ಪ್ರವೃತ್ತಿಯನ್ನು ಹುಟ್ಟಿಹಾಕುತ್ತಿರುವ ಪೂಜೆಯ ಮಂತ್ರಗಳು , ಜಾಗಟೆಯ ಶಬ್ಧ ಮತ್ತು ದುರ್ಗುಣ ಸಂಬೋಧಿಸುವ ’ಅಧರ್ಮ’ ಗ್ರಂಥ ಮಾನವನಿಗೆ ಅನವಶ್ಯಕವಾಗಿರುವ ಅಸೂಯೆ , ಲೋಭ , ರೋಷಗಳನ್ನು ಒಳಗೊಂಡು ಮತ್ತೊಂದು ಚರಿತ್ರೆ ಬರೆಸಲು ಹೊರಟಿದೆ. ಈ ಚರಿತ್ರೆಗೆ ಮೂಲವಾಗಿರುವುದು ಆ ಹಿಂದೂ ಧರ್ಮದ ದುರ್ಮಾರ್ಗ ಪ್ರೇರೆಪಿಸುವ ದುರ್ದರ್ಮಗ್ರಂಥ . ಎಂಗೆಲ್ಸ್ ಹೇಳಿದಂತೆ ಚರಿತ್ರೆ ಮುಂದುವರೆಯಲು ಕಾರಣವೇ "Evil passions of men " . ಇಂತಹ ಧರ್ಮದ ಸ್ವಭಾವ ಹುಡುಕಹೊರಟಿರುವ ಸಂಭ್ರಮದ ಅಗತ್ಯತೆಯನ್ನು ಕೊನೆಗಾಣಿಸಬೇಕು . ’ ಕಳಬೇಡ , ಕೊಲಬೇಡ ’ ಎನ್ನುವ ಮಾತನ್ನು ಹೇಳದ ಧರ್ಮಗ್ರಂಥಗಳನ್ನು ಅದರ ಮೂಲಕೃತಿಯೂ ಸಿಗದಂತೆ ಸುಟ್ಟುಹಾಕಬೇಕು . ಬ್ರಾಹ್ಮಣನಾದವ ಹೊಲೆಯರಾದವಳೊಂದಿಗೆ ಸಂಭೋಗಿಸಿ , ಹೊಲೆಯನಾದವ ಬ್ರಾಹ್ಮಣನಾದವಳು ಸ್ವಾಧಿಸಿ ಧರ್ಮವನ್ನು ಪುನರ್ ರಚಿಸಬೇಕು . ಬ್ರಾಹ್ಮಣ್ಯವನ್ನು ಬೇರು ಸಮೇತ ಕಿತ್ತು ಸಮಾಜದಲ್ಲಿನ ತಲ್ಲಣಾದಿಗಳನ್ನು ದೂರ ಮಾಡಬೇಕು . ಬ್ರಾಹ್ಮಣ್ಯದ ಪಿಸ್ತೂಲನ್ನು ಹಿಡಿದು ವಿಚಾರವಾದಿಗಳ ಕೊಂದವರ ಬೆರಳಚ್ಚನ್ನು ಕಂಡುಹಿಡಿಯುವುದು ಕಷ್ಟ . ಏಕೆಂದರೆ ಈಗ ಬ್ರಾಹ್ಮಣ್ಯದ ಪಿಸ್ತೂಲನ್ನು ಕೇವಲ ಬ್ರಾಹ್ಮಣರಷ್ಟೆ ಹಿಡಿದಿಲ್ಲ , ಅದನ್ನು ಏಲ್ಲ ವರ್ಗದವರು ಸಂಘಟನೆಯೊಂದರ ಮುಖೇನ ಹಿಡಿದಿದ್ದಾರೆ . ಆ ಸಂಘಟನೆಯನ್ನು ನಾಶಪಡಿಸುವಂತಾಗಲೆ ನಮ್ಮೆಲ್ಲಾ ವಿಚಾರವಾದಿಗಳು ಶಾಂತಿಯ ಮೂಲಕವಾದರೂ ಅಥವಾ ಕ್ರಾಂತಿಯ ಮೂಲಕವಾದರೂ.

Monday, March 30, 2015

ರಾಮ ದೇವರೊ ಅಲ್ಲವೋ ನಂಗೂ ಗೊತ್ತಿಲ್ಲ!! ಆದರೇ ....
-ಡಾ.ಅಭಿನಂದನ ಬಳ್ಳಾರಿ

ಎಲ್ಲೋ ಯು.ಆರ್ .ಅನಂತಮೂರ್ತಿಯವರ "ಋಜುವಾತು "ಬರಹದಲ್ಲಿ ಒದಿದ ನೆನಪು , ಭಾರತದ ನಾಗರೀಕತೆಯನ್ನು ಪೇಗನ್ ನಾಗರೀಕತೆ ಎನ್ನುತ್ತಾರೆ. ಪೇಗನ್ ಎಂದರೆ ಬಹುದೇವರಾಧನೆಯ ನಂಬಿಕೆಯುಳ್ಳ ನಾಗರೀಕತೆ . ೩ಕೋಟಿ ದೇವರಿದ್ದಾರೆ ಎಂದು ನಂಬುವ ನಮ್ಮದು ಅದೇ ನಾಗರೀಕತೆ . ದೈವ ಸಾಕ್ಷಾತ್ಕಾರ ಮಾಡಿಕೊಳ್ಳಲು ದಿನಕ್ಕೊಂದು ದೇವಸ್ಥಾನಗಳಿಗೆ ತೆರಳುವವರು ನಮ್ಮಲ್ಲಿದ್ದಾರೆ . ನಮಗೆ ಕಲ್ಲು ದೇವರು , ಮಣ್ಣಿನ ಹುತ್ತವೂ ದೇವರು , ಒಂದು ಬೇವು -ಅರಳಿ ಮರವೂ ಕೂಡ ದೇವರೆ. ನಾನು ಭಾರತದ ಧರ್ಮಗ್ರಂಥವನೆಲ್ಲಾ ಗೌರವಿಸುತ್ತೇನೆ , ಅವು ನಮಗೆ ಒಳ್ಳೆಯ ಸಂಸ್ಕೃತಿ ಕೊಟ್ಟಿವೆ ಆದರೆ , ಇಂಥಹ ಧರ್ಮಗ್ರ್ಂಥಗಳು ಅಸ್ಪ್ರಷ್ಯತೆಯನ್ನು ಹುಟ್ಟುಹಾಕಿವೆಯಲ್ಲ ಎನ್ನುವ ದುಗುಡ ಕೂಡ . ದೇವರನ್ನು ಅವನ ಅಸ್ತಿತ್ವವನ್ನು ತಿಳಿಯುತ್ತಲೆ ಹೋಗುತ್ತೇವೆ ಅದಕ್ಕೊಂದು ಅಂತ್ಯವಿಲ್ಲ , ಉತ್ಸವ , ಹಬ್ಬ , ಜಾತ್ರೆಬಂತಿದೆಂದರೆ ಖುಷಿಪಡುವವರ್ಯಾರಿಲ್ಲ ಹೇಳಿ ? ಅವೆಲ್ಲ ಭಾರತದ ಶ್ರೀಮಂತ ಸಂಸ್ಕೃತಿ ಆದರೇ ಇಂಥಹ ಸಂಭ್ರಮಗಳು ಕೇವಲ ದೇವರಾರ್ಚನೆಗೆ ಮೀಸಲಾಗುತಿರುವುದು ವಿಷಾದನೀಯ . ದೈವವನ್ನು ಅಲ್ಲಗಳೆಯಲು ನಾನು ಅತ್ಯಲ್ಪ ಆದರೇ ಜಾತ್ರೆ, ಹಬ್ಬದ ತಯಾರಿ ಮಾಡುವ ಮಾನವರನ್ನು ಅಸ್ಪ್ರಶ್ಯರು ಎಂದು ಅಲ್ಲಗಳೆಯುವ ಬ್ರಾಹ್ಮಣ್ಯವನ್ನು ನಾನು ಖಂಡಿಸುತ್ತೇನೆ. ಭೂಮಿಯನ್ನು ಅರಚಿ , ಅಗೆದು , ತೆಗೆದು ಮಾರಿ ತಿನ್ನುವ ಜನರಿಗಾಗಲೀ , ಹೆಣ್ಣನ್ನು ಗೌರವಿಸುತ್ತಲೆ ವೇಷ್ಯಾವಾಟಿಕೆಗೆ ತಳ್ಳುವ ಗೊಮುಖಗಳಿಗಾಗಲೀ , ಮಗಳನ್ನು ಕಾಮಿಸುವ ಅಪ್ಪನನ್ನಾಗಲೀ ಧಾರ್ಮಿಕ ನೆಲೆಗಟ್ಟಿನಲ್ಲಿ ಸಮರ್ಥಿಸುವುದು ಹೇಯ. ರಾಮನ ಬಗ್ಗೆ ನನಗೆ ಗೊತ್ತಿಲ್ಲ ಆದರೇ ರಾಮಯಣವಂತೂ ನಮಗೆ ಒಳ್ಳೆಯ ಮಾರ್ಗದರ್ಶಕ ಗ್ರಂಥವಾಗಲಾರದು . ಈಗಂತೂ ಓಟಿಗಾಗಿ ಗೋ ರಕ್ಷಣೆ ಮತ್ತು ಧರ್ಮಸಮ್ಮೇಳನ ನಡೆಸುತ್ತಿರುವವರು ರಾಮಾಯಣದ ಮಾರ್ಗದರ್ಶನದಲ್ಲಿ ಬೆಳೆದಿರಬಹುದೆಂಬ ಊಹೆ ನನ್ನಲ್ಲಿ ಉಂಟಾಗುತ್ತದೆ . ಕ್ರೌರ್ಯವನ್ನು ಹುಟ್ಟುಹಾಕಿದ ರಾಮಾಯಣದ ಬಗ್ಗೆ ಹೆಚ್ಚು ನಿಂದಿಸದೆ ವೇದ-ಉಪನಿಷತ್ತುಗಳಲ್ಲಿ ಅಡಗಿರುವ ಪರಮಾರ್ಥ ಸತ್ಯದ ಅರಿವನ್ನು ಪಡೆಯೋಣ , ಹಾಗೂ ಕೆಟ್ಟದನ್ನು ನಿರಾಕರಿಸಿ , ಒಳ್ಳೆಯದನ್ನು ಸ್ವೀಕರಿಸೋಣ . "ಅನೋ ಭದ್ರಾ: ಕೃತವೋ ಯಂತು ವಿಶ್ವತ:"  ಭಾರತಕ್ಕೆ ಶಾಂತಿಯ ಅಗತ್ಯವಿದೆ , ನಮ್ಮೆಲ್ಲರ ಮನಸ್ಸುಗಳು ತಿಳಿಗೊಳ್ಳುವ ಅವಶ್ಯಕತೆ ಇದೆ ಎಂದು ಪ್ರಸ್ತುತದಲ್ಲಿ ಬಾಳಲು ಪ್ರಯತ್ನಿಸೋಣ.

Tuesday, February 3, 2015

ಕಳ್ಳು-ಬಳ್ಳಿಯ ಕತ್ತರಿಸಿಕೊಂಡು ದೂರವಾದ ಡಾ.ವಸು ಮಳಲಿ :
-ಡಾ.ಅಭಿನಂದನ ಬಳ್ಳಾರಿ .
"ಯಾವುದೇ ಚಿಂತನೆಯನ್ನು ತಡೆಹಿಡಿಯಲಾಗದು , ಅದು ಪರಿಮಳದಂತೆ ಹರಡುತ್ತದೆ ಎನ್ನುವುದಕ್ಕೆ ಮಾರ್ಕ್ಸ್ ವಾದ ಉತ್ತಮ ಸಾಕ್ಷಿ" ಎನ್ನುವ ಬರಹ ನನಗೆ ಇವತ್ತು ನೆನಪಿದೆ . ಕನ್ನಡ ಹಾಗೂ ಕರ್ನಾಟಕದ ಇತಿಹಾಸವನ್ನು ಹೊಸ ದೃಷ್ಠಿಕೋನದಿಂದ ನೋಡಿದ್ದ , ಭಾರತದ ಚರಿತ್ರೆಯನ್ನು ವಿಶಿಷ್ಟವಾಗಿ ವಿಮರ್ಶಿಸುತ್ತಿದ್ದ ಅಂಕಣಕಾರರು , ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು , ಲೇಖಕರು ಆಗಿದ್ದ ವಸು ಮಳಲಿ ಮರಳಿ ಬಾರದ ಲೋಕಕ್ಕೆ ಹೋಗಿದ್ದಾರೆ . ಅಪಾರ ಚಿಂತನೆಯಿಂದ ಬ್ರಾಹ್ಮಣ್ಯದ ಬಗ್ಗೆ , ಮಹಾಕಾವ್ಯಗಳ ಬಗ್ಗೆ , ಇತಿಹಾಸ ತಜ್ಞರ ಬಗ್ಗೆ , ಬಡವರ ಬಗ್ಗೆ , ರಾಜಕೀಯದ ಬಗ್ಗೆ , ಪರಿಸರದ ಬಗ್ಗೆ ಹೀಗೆ ಹಲವಾರು ವಿಷಯಗಳ ಬಗ್ಗೆ ವಿಸ್ತೃತವಾಗಿ ಮನಮುಟ್ಟುವಂತೆ ಬರೆಯುತ್ತಿದ್ದ ವಸುರವರ ಜ್ಞಾನದ ದಾಹಕ್ಕೆ ಮೀತಿಯೇ ಇರಲಿಲ್ಲ. ಜಾತಿ , ಒಳಜಾತಿ , ಧರ್ಮ , ಭಾಷೆ , ನೆಲದಿಂದ ನಾವೆಲ್ಲ ಒಂದು ಎಂದು ಭಾವಿಸುವ ಸಮಾಜದ ಸೃಷ್ಟಿ ದುರದೃಷ್ಟಕರ ಎಂದು ಪ್ರತಿಪಾದಿಸಿದ್ದ ಅವರು "ದೈವಗಳು ಸೊಗಸಾಗಿ ಜನರನ್ನು ಒಗ್ಗೂಡಿಸುವಂತೆ , ಉಳಿದವರನ್ನು ದೂರವಿಡುತ್ತದೆ " ಎಂದು ಹೇಳಿದ್ದರು . "ರಾಷ್ಟ್ರೀಯತೆಯ ಕಲ್ಪನೆಗೆ ಧರ್ಮ ಬೆರೆತರೆ ಮಾದಕ ದೃವ್ಯಗಳೆರಡನ್ನು ಬೆರೆಸಿ ಕುಡಿದಂತೆ " ಎನ್ನುವ ವೈಚಾರಿಕತೆಯಲ್ಲಿರುವ ಸೂಕ್ಷ್ಮತೆಯನ್ನು ಮತ್ತು ಗ್ರಹಿಕೆಯನ್ನು ನೋಡಿ ಬೆಕ್ಕಸ ಬೆರಗಾದಾರು .... ಇದು ವಸು ಮಳಸಿ ಯೋಚಿಸುತ್ತಿದ್ದ ಪರಿ !! ಸ್ಲಂನ ಬಗ್ಗೆ ಅಲ್ಲಿ ವಾಸಿಸುವ ವಲಸೆ ಬಂದ ಬಡಜನರನ್ನು ಎತ್ತಂಗಡಿ ಮಾಡುವ ನಗರ ಪ್ರದೇಶದ ಕ್ರೌರ್ಯವನ್ನು ಖಂಡಿಸಿದ್ದ ವಸು , ಬಡವರ ಪರ ಕಾಳಜಿ ವಹಿಸಿ ಬಡವರನ್ನು ಹಾಗೂ ಸ್ಲಂಗಳನ್ನು ನಿರ್ಮೂಲನೆ ಮಾಡಬಾರದು ಬದಲಾಗಿ ಮನಸ್ಸಿಗೆ ಹತ್ತಿರುವ ಕೊಳೆ , ನಗರವೆಂಬ ಸೋಗಿನ ದುರ್ನಾತ , ಮುಸುಕಿನೊಳಗೆ ನಾರುವ ಭ್ರಷ್ಟಾಚಾರವನ್ನು ತೊಳೆದು ಹಾಕಬೇಕಿದೆ ಎಂದು ಸಾರಿದ್ದರು . ವಿಚಾರಗಳನ್ನು ಗ್ರಹಿಸಲು ಅವರಲ್ಲಿ ಇದ್ದ ಆ ಒಂದು ಬುದ್ಧಿವಂತ ಕ್ರಾಂತಿಯ ಚೇತನ ಜಾಗೃತವಾಗಿತ್ತು . ಇತಿಹಾಸವನ್ನು ನೋಡಲು ಬೇಕಾಗಿದ್ದ ಸ್ಥಿತಿಸ್ಥಾಪಕತ್ವ ಅವರಲ್ಲಿ ಇದ್ದುಅದರಿಂದಲೇ ಬರಹದ ಬಲವನ್ನು ಹೆಚ್ಚಿಸುವಂತೆ ಅಕ್ಷರಗಲು ಇತಿಹಾಸವನ್ನು ಮರುಸೃಷ್ಠಿಮಾಡುತ್ತಿದ್ದವು . ಲೈಂಗಿಕ ಅಲ್ಪಸಂಖ್ಯಾತರ ಪುನರ್ವಸತಿ ಕುರಿತಾಗುಇ ಸಭೆಯೊಂದರಲ್ಲಿ ಮಾತನಾಡಿದ್ದ ವಸುರವರು , ಲೈಂಗಿಕ ಅಲ್ಪಸಂಖ್ಯಾತರ ಸಹಾಯವಾಣಿಯನ್ನು ಬಿಡುಗಡೆಮಾಡುವ ಸಂದರ್ಭದಲ್ಲಿ ಸಹಾಯವಾಣಿಯು ಹೇಗೆ ದುರುಪಯೋಗವಾಗುತ್ತದೆ ಎಂದು ಹೇಳಿ ವ್ಯವಸ್ಥಾಪಕರ ಕೆಂಗಣ್ಣಿಗೆ ಗುರಿಯಾಗಿದ್ದರು . ಆಧುನಿಕ ಸಲಕರಣೆಗಳನ್ನು ಬಳಕೆಯಿಂದ ಪಿಡುಗುಗಳಿಗೆ ಆಧುನಿಕ ಸ್ವರೂಪ ಬರುತ್ತದೆ ಎಂದು ಆ ಸಭೆಯಲ್ಲಿ ಅವರು ಪ್ರತಿಪಾದಿಸಿದ್ದರು . ಬಂಡವಾಳಶಾಹಿಗಳ ವಿರುದ್ಧ ರಣಕಹಳೆಯನ್ನು ಮೊಳಗಿಸಿದವರಂತೆ ಬರೆಯುತ್ತಿದ್ದ ಅವರು , ರಾಜಕೀಯದಲ್ಲಿ ಉದ್ಯಮಿಗಳು ಹೂಡುವ ಹಣ ಐದು ವರ್ಷ ನಿರಂತರವಾಗಿ ಕರೆಯುವ ಹಸುವಿಗೆ ಹಿಂಡಿಹಾಕಿದಂತೆ,ಜನಸಾಮಾನ್ಯರಿಗೆ ಇರುವ ಎಕೈಕ ಬಂಡವಾಳ ವೋಟು , ಅದನ್ನು ಖಡ್ಗವಾಗಿಸಿ ಪ್ರಜಾಪ್ರಭುತ್ವಕ್ಕಾಗಿ ಹೋರಾಡಬೇಕಿದೆ ಎನ್ನುವ ಕಿಚ್ಚನ್ನು ಹಚ್ಚಿ, ಕ್ಯಾನ್ಸರನಿಂದ ಬಳಲುತ್ತಿದ್ದರೂ ಇತಿಹಾಸವನ್ನು , ಜನಪರ ಕಾಳಜಿಯನ್ನು , ಮೌಲ್ಯಾಧಾರಿತ ವೈಚಾರಿಕತೆಯನ್ನು , ಮಾನವೀಯ ಗುಣಗಳನ್ನು ತೆರೆದಿಡುತ್ತಿದ್ದ ಡಾ.ವಸು ಮಳಲಿ ತಮ್ಮ ಓದುಗರೊಂದಿಗೆ ಹೊಂದಿದ್ದ ಕಳ್ಳು-ಬಳ್ಳಿಯನ್ನು ಕತ್ತರಿಸಿಕೊಂಡು ಮರೆಯಾಗಿದ್ದಾರೆ . ವಸುರವರ ಸಂಶೋಧನೆ ಇತಿಹಾಸದ ಸಂಕೀರ್ಣತೆಯನ್ನು ಸಂಪೂರ್ಣಗೊಳಿಸಿದೆ(ಕಾಂಪ್ಲೆಕ್ಸಿಟಿ ಟು ಕಂಪ್ಲೀಟ್) . ಅವರ ಚಿಂತನೆಯನ್ನು ನಾವು ಗೌರವಿಸುತ್ತ , ಪಾಲಿಸುತ್ತ ಮರೆಯಾದ ವಸುವಿನ ಆತ್ಮಕ್ಕೆ ಶಾಂತಿ ಕೋರೊಣ .

Sunday, January 4, 2015

24. ಭೋಜನ:

ಆಲೂಗಡ್ಡೆ ಬೊಂಡಾದ ಜೊತೆ 
ಎಣ್ಣೆ ಬದನೆಕಾಯಿ 

ಶಾವಿಗೆ ಖೀರು 
ಅನ್ನ ತಿಳಿ ಸಾರು 

ಇಡ್ಲಿ ಸಾಂಬಾರ್ 
ಒಂದನೇ ನಂಬರ್
ಪೂರಿ ಚಪಾತಿ 
ಲೋಕಕೆ ಖ್ಯಾತಿ 

ಉಪಿಟ್ಟು ಸಿರ 
ಜೊತೆಗಿಷ್ಟು ಖಾರ
ಗೋಲಿ ಜಿಲೇಬಿ 
ಬಾಯಿ ಗುಲಾಬಿ 

ಚಿರೋಟಿ ಹೋಳಿಗೆ 
ಹೋದರೆ ಹೊಟ್ಟೆಯೊಳಗೆ 
ಮಿಡಿ ಉಪ್ಪಿನಕಾಯಿ 
ತಿನ್ನದವನೆ ನಾಯಿ 


ಬಿಸಿ ಬಿಸಿ ಪಾಯ್ಸ
ಜೋತೆಲ್ಲಿಷ್ಟು ಹಾಸ್ಯ
ಫಿಳ್ಟರ್ರು ಕಾಫಿ 
ಕುಡಿಯದವನೆ ಪಾಪಿ  

ವ್ಯಸನ:
ವ್ಯಸನಕ್ಕೆ  ವ್ಯಾಕುಲನಾದೆನಯ್ಯ
ಕೆಲಸ ಮುಗಿಸಿ ಬಂದ ಮೇಲೆ
ಅಂಟು ತೆಗೆದು ಮೂಸಿ ನೋಡಿ
ಮನದ ಚಿಂತೆ ಮರೆತೆನಯ್ಯ 

ಒದಿನ ಗೀಳು ಬಿಡಿಸಿ 
ದುಡಿವ ಗೀಳು ಹಿಡಿಸಿದ ಮನಕೆ 
ಸಂತಸ ತರುವ ನಿನಗೆ ನಾನು ವ್ಯಾಕುಲನಾದೆನಯ್ಯ

ಕುಡಿದು ಬಂಡು ಹಡೆದಾಕೆಗೆ ಹೊಡೆದ 
ಅಪ್ಪನ ಕ್ರೌರ್ಯವನ್ನು ಮರೆಯಲು 
ನೆಮ್ಮದಿ ತರುವ ನಿನಗೆ ನಾನು ವ್ಯಾಕುಲನಾದೆನಯ್ಯ

ಬದುಕ ಕಿತ್ತ ಭ್ರಮೆಯ ರಚಿಸುವ
ನಿನ್ನಹ ಸುಖದ ಊಹೆಗೆ 
ವ್ಯಾಕುಲನಾದೆನಯ್ಯ , ವ್ಯಾಕುಲತೆ ಬೇಡಯ್ಯ!!!!!


ದ್ಯಾಮವ್ವ :
-ಡಾ.ಅಭಿನಂದನ ಬಳ್ಳಾರಿ
ದ್ಯಾಮವ್ವ ನಿನಗ ಹರಕಿ ಹೊತ್ತು
ಬೆಟ್ಟ ಸುತ್ತು ಬಂದೇವ
ಮನ್ಯಾಗ ಮಕ್ಕಳಿಗ ಉಸಾರು ಇಲ್ಲ
ತಿನ್ನಾಕ ಗಂಜಿಯು ಇಲ್ಲ
ಸಾಯಕತ್ತೀವ ಊರಾಗ ಮಳಿಯಾಗ್ದ
ನಿನ್ನ ಕರುಣ್ಯಾ ಕೇಳಲು ಬಂದೇವ ತಾಯಿ ,
ನೀ ನಮ್ಮನ್ನ ಕಾಯಿ ಅಂತ ಬಂದಾರ ಆಕೆಯ ದಲಿತ ಭಕುತರು
ದ್ಯಾಮವ್ವ ಗುಡಿಯಾಗ ಬೆಚ್ಚಗ ಕುಂತಾಳ
ಬ್ರಾಹ್ಮಣರ ಪೂಜೆಯಲಿ ತಲ್ಲೀನಳಾಗ್ಯಾಳ
ದ್ಯಾಮವ್ವ ಬರ್ತಾಳ ಹೊರಗ ಇರಿ ಅಂದಾರ
ನಿಮ್ಮನ್ನ ಆಕೀನ ಬಂದು ಮಾತಾಡಿಸ್ತಾಳ
ಕಾದಾರು ಕಾದಾರು ಕಲ್ಲಾಗಿ ಬರಲಿಲ್ಲ ದ್ಯಾಮವ್ವ
ಬಂದಾಳೂ ಬ್ರಾಹ್ಮಣನ ಮೈಮ್ಯಾಲೆ
ಸಂವೇದನೆ ಅರಿಯದ ದ್ಯಾಮವ್ವ ನುಡಿದಾಳು
ಬ್ರಾಹ್ಮಣರ ಆಳಾಗಿ ಎಂದಾಳು
ಆಳಾಗಿ ಎಂದಾಳು ಹಾಳಾಗಿ ಎಂದಾಳು
ತನ್ನವತಾರ ಕಳಚಿ ಬಿದ್ದಾಳು !!!!
ಕನ್ನಡದ ಬಾಲ್ಯ
ಡಾ.ಅಭಿನಂದನ ಬಳ್ಳಾರಿ

ಸಂಗ್ಯಾ ಬಾಳ್ಯಾ ಎನ್ನಿರಯ್ಯ
ಸಾಕು ನಮಗೆ ಹಮ್ಟಿ ಡಮ್ಟಿ
ನಮ್ಮ ಮಕ್ಕಳು ಆಡಬಾರದೇನು
ನಲಿಯಬಾರದೇನು , ಕುಣಿಯಬಾರದೇನು ?
ಚಿನ್ನಿ ದಾಂಡು ಹೆಂಗ ಆಡ್ತಾರೆ ಗೊತ್ತಾ?
ಆಗಸಕ್ಕೆ ಗುರಿ ಇಡ್ತಾರೆ ಗೊತ್ತಾ?
ಬಾಲ್ಯಕ್ಯಾಕೆ ಬೇಕು ಆಂಗ್ಲದ ಪ್ರಾಸ
ಇರಲಿ ಕನ್ನಡ ಪ್ರೀತಿ ಬೆರೆತ ರಸ 
ಹೋಲಿಕೆ :
ಡಾ.ಅಭಿನಂದನ ಬಳ್ಳಾರಿ
ಹೋಲಿಕೆ ಬರೀ ಹೋಲಿಕೆ
ಆತ ಸುಂದರನೆಂಬ
ಆಕೆ ಬುದ್ಧಿವಂತಳೆಂಬ
ಅಂಕದಲೂ , ಆಟದಲೂ , ಕಡೆಗೆ ಸಂಬಳದಲೂ
ಹೋಲಿಕೆಯಿಂದಲಿ ಅಸಾಧ್ಯ ವಿಕಸನ
ಪೂರ್ಣತೆ ಕಳೆದು ಕೊಳ್ಳುವುದು ಜೀವನ

ನೆಮ್ಮದಿ:
ಡಾ.ಅಭಿನಂದನ ಬಳ್ಳಾರಿ

ಕುತಂತ್ರದ ಸಂಕೀರ್ಣತೆಗೆ
ಚಟದ ತೃಪ್ತಿಕರತೆಗೆ
ಮೋಸದ ಆತ್ಮವಂಚನೆಗೆ
ಭಯದ ಹತೋಟಿಗೆ
ತೀರ್ಮಾನದ ಗುಪ್ತತೆಗೆ
ಭಾಂಧವ್ಯದ ತಿಳುವಳಿಕೆಗೆ
ಕೊನೆಗೆ ಸ್ವಯಂ ತನ್ಮಯತೆಗೂ ಸಿಕ್ಕಲಿಲ್ಲ
ಅದೇ ನೆಮ್ಮದಿ

ಅಸ್ತಿತ್ವ
ಡಾ.ಅಭಿನಂದನ ಬಳ್ಳಾರಿ
ಆಸಕ್ತಿಯ ಅನುಕ್ರಮದ ಅಲೆಗಳಿಂದ
ಬಣ್ಣನೆಯ ಬಳಲಿಕೆಗಳಿಂದ 
ಬೇಸರದ ಸ್ವಾಧೀನದಿಂದ
ಬೇಡದ ಕುತೂಹಲಗಳಿಂದ
ಅನುಭವಿಸಲಾಗದ ಅಸಹನೆಯಿಂದ
ಕೂಡಿ ಸ್ಥಾಪಿತವಾಗಿಹುದು
ನನ್ನ ಅಸ್ತಿತ್ವ !!!!

Saturday, January 3, 2015

ವಿಧೇಯ:
-ಡಾ.ಅಭಿನಂದನ ಬಳ್ಳಾರಿ

ಅನುಭವದ  ಅನಿವಾರ್ಯ ದೇಹಕೆ
ಮನಸಿಗಿಲ್ಲ ಹೊರೆ
ಯಾವ ಸಂಚಿತದ ಬೇಡಿಕೆಗಳಿಂದಲೂ
ಮಗ್ಧವಾಗಿರುವುದು ಮನಸ್ಸು ಅನುಭವದ ಕಟ್ಟುಪಾಡಿಲ್ಲದೆ
ಇಲ್ಲದಿರೆ ಅದು ಎಚ್ಚರವಾಗಿರಲಾರದು
ಅನುಭವ ತಿಳಿಯಲು ಬೇಕು ವಿಧಾನ
ವಿಧಾನವಿಲ್ಲದಿರೇ ಮಾತ್ರ  ವಿಧೇಯ ಈ ಮನ 
ಪ್ರಭಾವ:
-ಡಾ.ಅಭಿನಂದನ ಬಳ್ಳಾರಿ

ಪ್ರಭಾವಿತನಾಗಬೇಡ
ಒಂದು ಪುಸ್ತಕಕೆ , ಒಬ್ಬ ಶಿಕ್ಷಕಗೆ ,ಒಂದು ಚಿಂತನೆಗೆ
ನೀ ಬಯಸಿದ ಚಿಂತನೆಯಲಿ ಜೀವನ ಸಾಗುತಿರಲಿ
ಆದರ್ಶಗಳು ಮನಸನು ಮೈದಾನವಾಗಿಸಿ
ಯುದ್ಧವನ್ನು ಮಾಡುತಲಿರೆ
ಆಕಾರಗಳು , ರೂಪಗಳು , ಅಭ್ಯಾಸಗಳು
ನಿಯಂತ್ರಿಸುತಲಿರೆ
ಅಸಂಬದ್ಧತೆಯಲಿ ಮೂಡುತ ಅಸ್ಪಷ್ಟತೆ
ಗೊಂದಲದ ಗೂಡಾಗುತ ಜೀವನ ಬಾಡುತ !!!

ನೈತಿಕತೆ:
ಡಾ.ಅಭಿನಂದನ ಬಳ್ಳಾರಿ
ಅಪ್ಪಿಕೊಂಡ ನೈತಿಕತೆ ಎಷ್ಟು ದಿನ ಇದ್ದೀತು
ಸದಾ ದ್ವೇಷ ಅಸೂಯೆ ಹಣದಹಂಬಲದಿಂದ ಕೊಳೆತವ ನೀನು
ಈಗ ಮರ್ಯಾದೆ  ಸ್ಥಾಪನೆಗೆ , ನಿನ್ನ ಲಾಭದಾಯಕ ಗುರಿಗಳಿಗೆ ನೈತಿಕತೆಯ ಸ್ವೀಕರಿಸೊ ನಾಟಕವಾಡುವೇಯಾ?
ಸ್ವೀಕರಿಸು.....
ನಿನ್ನ ನೈತಿಕತೆಯನ್ನು ನಮ್ಮ ತುಟಿಗಳು ಗೌರವಿಸಬಹುದು
ಹೃದಯವಲ್ಲ!!!
ಭಾವನೆ:
ಡಾ.ಅಭಿನಂದನ ಬಳ್ಳಾರಿ
ಭಾವನೆಯನು ಪ್ರೀತಿ ಎಂದು ಭಾವಿಸಿ ಅಪ್ಪಿಕೊಂಡೆ
ಅನೀರಿಕ್ಷೀತವಾಗಿ ಬಲುಬೇಗನೆ ಕಂಪನಕ್ಕೆ ಒಳಗಾದೆ
ಚಿಂತನೆಯು ಶುರುವಾಯಿತು
ಮನಸ್ಸು ಯೋಚಿಸತೊಡಗಿತು
ಭ್ರಮೆಯೋ ಅಲಂಕಾರಿಕವೋ ಈ ಭಾವನೆಯು
ಎನಾದರಾಗಿರಲಿ ಮನಘಾಸಿಮಾಡಿತ್ತು ಅದರ ಚಲನೆಯು !!!!

Friday, January 2, 2015

ಏಕಾಂತ:
-ಡಾ.ಪ್ರೊ.ಅಭಿನಂದನ ಬಳ್ಳಾರಿ

ಏಕಾಂತದಲಿ ನಂಬಿಕೆ ಇಡಲು ಭಯ
ತಣ್ಣನೆ ಗಾಳಿಯ ತಾಜಾತನದಿ
ಹೊಳೆವುದು ನೂರೊಂದು ನೂತನ ವಿಚಾರ
ದೇವರ ಇರುವಿಕೆ ಕಾಡುತಲಿ
ಸ್ವಂತ ಶಬ್ಧ ಮರೆಯಾಗುತಲಿ
ಅಹ್ವಾನಿಸುತ್ತದೆ ರಹಸ್ಯಗಳು
ಹಿಮ್ಮೆಟ್ಟುತ್ತದೆ ತಿಳಿವ ಬಯಕೆಗಳು
ಜ್ಞಾನವಾಗುತ್ತ ಏಕಾಂತದ ಸ್ವಾಧೀನ
ಅಜ್ಞಾತವಾಗಿದ್ದರೇ ಜೀವನವೇ ಪತನ!!!
ಬರವಿದ್ಯಾಕಯ್ಯ:
ಡಾ.ಅಭಿನಂದನ ಬಳ್ಳಾರಿ
ಬರವಿದ್ಯಾಕಯ್ಯ ಹುಟ್ಟಿಗೆ
ವಾತ್ಸಲ್ಯದಿ ತಾಯಾದಾಕಿಗೆ
ಮಮತೆಯ ತಂಗಿಯಾದಾಕಿಗೆ
ಮನೆಯನು ಬೆಳಗುವ ಮಡದಿಯಾದಾಕಿಗೆ

ಶಿಕ್ಷಣದಲ್ಲಿ ರಾಜಿಯಾದವಳು ನಾ
ಸಮಾನತೆಯಲ್ಲಿ ಹರಾಜು ಆದವಳು
ಆಹಾರವಿಲ್ಲದೆ ಒಣಗಿ ಕುಸಿದವಳು
ಕೆಲಸಕಾರ್ಯಗಳಲ್ಲಿ ನಿನ್ನ ಮೀರಿಸಿದವಳು

ನೀ ಕೊಂದರೆ ಅದು ನನಗೆ ಸಾವೇ ಅಲ್ಲ
ಹಿಂಸಾತ್ಮಕ ಬದುಕೆನಗೆ ಸಾವಿಗಿಂತ ಭಿನ್ನವಲ್ಲ!!!