ದ್ಯಾಮವ್ವ :
-ಡಾ.ಅಭಿನಂದನ ಬಳ್ಳಾರಿ
ದ್ಯಾಮವ್ವ ನಿನಗ ಹರಕಿ ಹೊತ್ತು
ಬೆಟ್ಟ ಸುತ್ತು ಬಂದೇವ
ಮನ್ಯಾಗ ಮಕ್ಕಳಿಗ ಉಸಾರು ಇಲ್ಲ
ತಿನ್ನಾಕ ಗಂಜಿಯು ಇಲ್ಲ
ಸಾಯಕತ್ತೀವ ಊರಾಗ ಮಳಿಯಾಗ್ದ
ನಿನ್ನ ಕರುಣ್ಯಾ ಕೇಳಲು ಬಂದೇವ ತಾಯಿ ,
ನೀ ನಮ್ಮನ್ನ ಕಾಯಿ ಅಂತ ಬಂದಾರ ಆಕೆಯ ದಲಿತ ಭಕುತರು
ದ್ಯಾಮವ್ವ ಗುಡಿಯಾಗ ಬೆಚ್ಚಗ ಕುಂತಾಳ
ಬ್ರಾಹ್ಮಣರ ಪೂಜೆಯಲಿ ತಲ್ಲೀನಳಾಗ್ಯಾಳ
ದ್ಯಾಮವ್ವ ಬರ್ತಾಳ ಹೊರಗ ಇರಿ ಅಂದಾರ
ನಿಮ್ಮನ್ನ ಆಕೀನ ಬಂದು ಮಾತಾಡಿಸ್ತಾಳ
ಕಾದಾರು ಕಾದಾರು ಕಲ್ಲಾಗಿ ಬರಲಿಲ್ಲ ದ್ಯಾಮವ್ವ
ಬಂದಾಳೂ ಬ್ರಾಹ್ಮಣನ ಮೈಮ್ಯಾಲೆ
ಸಂವೇದನೆ ಅರಿಯದ ದ್ಯಾಮವ್ವ ನುಡಿದಾಳು
ಬ್ರಾಹ್ಮಣರ ಆಳಾಗಿ ಎಂದಾಳು
ಆಳಾಗಿ ಎಂದಾಳು ಹಾಳಾಗಿ ಎಂದಾಳು
ತನ್ನವತಾರ ಕಳಚಿ ಬಿದ್ದಾಳು !!!!
-ಡಾ.ಅಭಿನಂದನ ಬಳ್ಳಾರಿ
ದ್ಯಾಮವ್ವ ನಿನಗ ಹರಕಿ ಹೊತ್ತು
ಬೆಟ್ಟ ಸುತ್ತು ಬಂದೇವ
ಮನ್ಯಾಗ ಮಕ್ಕಳಿಗ ಉಸಾರು ಇಲ್ಲ
ತಿನ್ನಾಕ ಗಂಜಿಯು ಇಲ್ಲ
ಸಾಯಕತ್ತೀವ ಊರಾಗ ಮಳಿಯಾಗ್ದ
ನಿನ್ನ ಕರುಣ್ಯಾ ಕೇಳಲು ಬಂದೇವ ತಾಯಿ ,
ನೀ ನಮ್ಮನ್ನ ಕಾಯಿ ಅಂತ ಬಂದಾರ ಆಕೆಯ ದಲಿತ ಭಕುತರು
ದ್ಯಾಮವ್ವ ಗುಡಿಯಾಗ ಬೆಚ್ಚಗ ಕುಂತಾಳ
ಬ್ರಾಹ್ಮಣರ ಪೂಜೆಯಲಿ ತಲ್ಲೀನಳಾಗ್ಯಾಳ
ದ್ಯಾಮವ್ವ ಬರ್ತಾಳ ಹೊರಗ ಇರಿ ಅಂದಾರ
ನಿಮ್ಮನ್ನ ಆಕೀನ ಬಂದು ಮಾತಾಡಿಸ್ತಾಳ
ಕಾದಾರು ಕಾದಾರು ಕಲ್ಲಾಗಿ ಬರಲಿಲ್ಲ ದ್ಯಾಮವ್ವ
ಬಂದಾಳೂ ಬ್ರಾಹ್ಮಣನ ಮೈಮ್ಯಾಲೆ
ಸಂವೇದನೆ ಅರಿಯದ ದ್ಯಾಮವ್ವ ನುಡಿದಾಳು
ಬ್ರಾಹ್ಮಣರ ಆಳಾಗಿ ಎಂದಾಳು
ಆಳಾಗಿ ಎಂದಾಳು ಹಾಳಾಗಿ ಎಂದಾಳು
ತನ್ನವತಾರ ಕಳಚಿ ಬಿದ್ದಾಳು !!!!
No comments:
Post a Comment