ಪ್ರಕ್ಷುಬ್ಧ:(ಎಚ್ಚರಿಕೆ ಪತ್ರಿಕೆಯಲ್ಲಿ ಪ್ರಕಟಗೊಂಡ ಕವಿತೆ)
-ಡಾ.ಪ್ರೊ.ಅಭಿನಂದನ ಬಳ್ಳಾರಿ , ಚಿಂತಕರು , ಸಾಹಿತಿಗಳು , ಬೆಂಗಳೂರು
ಆ ದಿನವು ನೆನಪಾಯಿತು
ಪ್ರಸ್ತುತದಲ್ಲಿ ಭರವಸೆಯನ್ನು ರಚಿಸಿತು ಭಯದ ಜೊತೆ
ಯಾವುದನ್ನು ಆಯ್ಕೆಮಾಡುವುದು ಎಂಬ ಜಿಜ್ಞಾಸೆ
ಭಯವು ನಿಯಂತ್ರಿಸುತ, ಭರವಸೆಯು ಷರತ್ತನ್ನು ವಿಧಿಸುತ
ನನ್ನ ವರ್ತಮಾನವನ್ನು ಪ್ರಕ್ಷುಬ್ಧವಾಗಿಸಿವೆ
ನನ್ನ ಕಿವಿಯಲ್ಲಿ ವಟಗುಟ್ಟುತಿವೆ ಆ ಪುರಾಣಪಠಣಗಳು ,
ಆಲಿಸಲಾಗುತ್ತಿಲ್ಲ ಬಡದಲಿತರ ರೋದನ ,ಆವರಿಸಿದೆ ಎಲ್ಲೆಲ್ಲೂ ದೇವಸ್ಥಾನಗಳು ,
ಮರೆಯಾಗಿದ್ದಾನೆ ಸಲಹಬೇಕಿರುವ ದೇವರು ,
ಬೇಕೆ ನಮ್ಮ ಮನುಕುಲಕೆ ಈ ಸ್ಪರ್ಧಾತ್ಮಕ ಧರ್ಮಗಳು ,
ಕಡ್ಡಾಯತನದಿಂದ ಕಟ್ಟಿಹಾಕುವ ಮೂಢವಿಚಾರಗಳು ,
ನಿರ್ವಿಧೇಯ ಧರ್ಮಗಳು ಸದಾ ಸ್ಮರಿಸುವಂತಹವು
ಸಂಘರ್ಷ , ಪಂಥಿಯತೆ , ಅಸಹಿಷ್ಣುತೆಯ ಕೊಡುಗೆ ಕೊಟ್ಟವು
ವೇಗದಲ್ಲಿ ವಿವೇಕವ ಕಿತ್ತಿ , ಹಿಂಸಿಸುವ ಜಾತೀಯತೆ ಬಿತ್ತಿ
ಬರಡುಮಾಡುತ್ತಿವೆ ಬದುಕ , ಆರಿಸಲು ಪ್ರಯತ್ನಿಸುತಿವೆ ಮನೆಮನದ ಬೆಳಕ
ಬನ್ನಿ ಧಿಕ್ಕರಿಸುತ ಈ ಸರ್ವಾಧಿಕಾರದ ಸಂಸ್ಥಾನ ,
ಆಹ್ವಾನಿಸುತ ಗೌರವಿಸೋಣ ಭಾರತದ ಸಂವಿಧಾನ.
No comments:
Post a Comment