ಹೈದರಾಲಿಯ ಮನಸ್ಸು ಗೆದ್ದು ಆತನ ಆಸ್ಥಾನದಲ್ಲಿ ಕಿರಿಯ ಲೆಕ್ಕಿಗನ ಸ್ಥಾನ ಗಿಟ್ಟಿಸಿದ ಅವನ ಹೆಸರು ಪೂರ್ಣಯ್ಯ. ಮಾಧ್ವ ಬ್ರಾಹ್ಮಣನಾಗಿದ್ದ ಪೂರ್ಣಯ್ಯ ತುಪ್ಪ ತಿಂದು ತಿಂದು ತನ್ನ ಬುದ್ಧಿಯನ್ನು ಮಿತಿ ಮೀರಿ ಚುರುಕುಗೊಳಿಸಿಕೊಂಡಿದ್ದ. ಹೈದರ್ ಗೆ ಆಗೊಮ್ಮೆ ಅತೀ ಸಂಕಷ್ಟದ ಸಂಧರ್ಭ ಎದುರಾದಾಗ ಅಂಥಹ ಪರಿಸ್ಥಿತಿಯಿಂದ ಹೈದರತಪ್ಪಿಸಿಕೊಳ್ಳಲು ಸಹಾಯಮಾಡುವ ಮೂಲಕ ಪೂರ್ಣಯ್ಯ ಹೈದರ್ ನ ವಿಶ್ವಾಸ ಗೆದ್ದು ಆತನ ತೋಶಿಖಾನೆಯ ಮುಖ್ಯಸ್ಥನಾಗುತ್ತಾನೆ. ಹೈದರ್ ದರ್ಬಾರ್ ನ ಕೆಲವೇ ಕೆಲವು ಗಣ್ಯರಲ್ಲಿ ಪ್ರಮುಖನಾಗುತ್ತಾ , ಆತನ ಆಸ್ಥಾನದಲ್ಲಿ ದೊಡ್ಡ ಸ್ಥಾನ ಗಿಟ್ಟಿಸಿಕೊಳ್ಳುತ್ತಾನೆ . ಆನಂತರ ಹೈದರ್ ಸತ್ತಾಗ ಆತನ ಶವವನ್ನು ಗುಟ್ಟಾಗಿ ಹೂತು ಮೈಸೂರು ಆಸ್ಥಾನವನ್ನು ಉಳಿಸಿದನು ಎಂಬ ಕೀರ್ತಿಯಡೆಯಲ್ಲಿಯೇ ಟಿಪ್ಪು ಸುಲ್ತಾನ್ ರಿಗೂ ಆಪ್ತನಾಗುತ್ತ ಆತನ ರಾಜಮಂತ್ರಿಯಾಗುತ್ತಾನೆ ಜನಿವಾರದ ಈ ಪೂರ್ಣಯ್ಯ. ಟಿಪ್ಪು ಆಸ್ಥಾನದ ಎಲ್ಲ ಗುಟ್ಟುಗಳು ಬಲ್ಲವರಲ್ಲಿ ಪೂರ್ಣಯ್ಯ ಅಗ್ರಜ. ಟಿಪ್ಪುವಿನೊಂದಿಗೆ ಸ್ನೇಹದಿಂದಲೇ ವರ್ತಿಸುತ್ತಾ ಹೆಸರುಗಳಿಸುತ್ತಾನೆ. ಕೆಲವು ಪರಂಗಿ ಇತಿಹಾಸಕಾರರು ಪೂರ್ಣಯ್ಯನನ್ನು ಮೈಸೂರ್ ಆಸ್ಥಾನದ ಪೂರ್ಣಚಂದ್ರ ಎಂದು ಬರೆದಿದ್ದಾರೆ. ಕೆಲವರು ಟಿಪ್ಪು ನಿಜಸ್ವರೂಪವನ್ನು ತಾವು ಕಾಣದಿದ್ದರು ಪೂರ್ಣಯ್ಯನ ಸ್ವರೂಪವನ್ನು ಕಂಡವರಂತೆ ಗೀಚಿದ್ದಾರೆ. ಈ ಪೂರ್ಣಯ್ಯ ಎಂಥಹ ನೀಚನೆಂದರೆ ತನ್ನ ಮಗಳನ್ನೆ ಟಿಪ್ಪುವಿನ ಬಳಿ ಕಳುಹಿಸಿ ಆತನನ್ನು ಮೋಹಿಸುವಂತೆ ಹೇಳುತ್ತಾನೆ. ಟಿಪ್ಪು ಯಾವಗ ಮೋಹಕ್ಕೆ ಬೀಳುವುದಿಲ್ಲ ಎಂದು ತಿಳಿಯುತ್ತದೆಯೋ ಆಗ ತಾನು ಮನೆಯಲ್ಲಿಲ್ಲದ ಸಮಯದಲ್ಲಿ ಟಿಪ್ಪು ತನ್ನ ಮನೆಗೆ ಬಂದು ತನ್ನ ಸೌಂದರ್ಯವತಿ ಮಗಳನ್ನು ಕೆಡಿಸಿದ್ದಾನೆ ಎಂದು ತನ್ನ ಎಲುಬಿಲ್ಲದ ನಾಯಿಯಿಂದ ಊರೆಲ್ಲ ಬೊಗಳುತ್ತಾನೆ ನೀಯತ್ತಿಲ್ಲದ ನಾಯಿ ಪೂರ್ಣಯ್ಯ. ಮತ್ತೊಂದು ಕಡೆ ಟಿಪ್ಪು ತನ್ನನ್ನು ಮುಸ್ಲಿಂ ಧರ್ಮಕ್ಕೆ ಮತಾಂತರವಾಗು ಎಂದು ಒತ್ತಾಯಿಸುತ್ತಿದ್ದಾನೆ ಎಂದು ಸಾರುತ್ತಾನೆ. ಈತನ ಮಾತನ್ನು ಟಿಪ್ಪುವಿನ ಎಲ್ಲ ಹಿಂದೂ ಹಿತೈಷಿಗಳು ನಂಬಿಬಿಡುತ್ತಾರೆ. ಹೀಗೆ ಟಿಪ್ಪುವನ್ನು ಹಿಂದೂವಿರೋಧಿ ಎಂದು ಬಿಂಬಿಸಿದವ ಪೂರ್ಣಯ್ಯ. ನಮಗೆ ಇತಿಹಾಸ ಓದಿದರೆ ತಿಳಿಯುತ್ತೆ ಟಿಪ್ಪು ಎಷ್ಟು ಧರ್ಮ ಸಹಿಷ್ಣುವಾಗಿದ್ದ ಮತ್ತು ಶೃಂಗೇರಿ ಮಠವನ್ನು ಮರಾಠಿಗರಿಂದ ರಕ್ಶ್ಃಇಸಿದ್ದು ಕೂಡ ಇದೇ ಟಿಪ್ಪು ಎಂದು . ಅಲ್ಲದೆ , ನಂಜನಗೂಡೀನ ನಂಜುಂಡೇಶ್ವರ ದೇವಾಲಯದಲ್ಲಿ "ಹಕೀಂ ನಂಜುಂಡ" ಎನ್ನುವ ಲಿಂಗವನ್ನು ನಿರ್ಮಿಸಿದ್ದು ಇದೇ ಟಿಪ್ಪು . ಸೋಜಿಗ ಸಂಗತಿ ಎಂದರೆ ಟಿಪ್ಪ ಆಸ್ಥಾನದ ಕಂದಾಯಮಂತ್ರಿ , ಮತ್ತು ಸೇನಾ ದಂಡನಾಯಕರಾಗಿದ್ದ ಕೃಷ್ಣರಾವ್ ಮತ್ತು ಶ್ರೀನಿವಾಸರಾವ್ ಇವರೆಲ್ಲ ಬ್ರಾಹ್ಮಣ ಹಿಂದೂಗಳೆ ಆಗಿದ್ದರು . ಟಿಪ್ಪು ಪಟ್ಟಬದ್ಧ ಪುರೋಹಿತಶಾಹಿ ಶಕ್ತಿಗಳಿಂದ ಜಮೀನನ್ನು ಕಸಿದು ಬಡವರಿಗೆ ನೀಡಿದ್ದು , ಮತ್ತು ಟಿಪ್ಪು ನರಬಲಿಯಂಥಹ ಮೂಢನಂಬಿಗೆಗಳನ್ನು ವಿರೋಧಿಸಿದ್ದು ಪೂರ್ಣಯ್ಯನಿಗೆ ಅರಗಿಸಿಕೊಳ್ಳಲಾಗದ ತುತ್ತಾಗಿ ಪರಿಣಮಿಸಿತು . ತನ್ನ ಹಿಂದುತ್ವವಾದಿ ಕೋಮುವಾದಿ ಪ್ರಚೋದನೆಗೆ ಒಳಗಾಗಿ ಟಿಪ್ಪು ಆಸ್ಥಾನ ಬಿಟ್ಟು ಬ್ರಿಟೀಷರ ಬಳಿಬಂದ ಪೂರ್ಣಯ್ಯ ಟಿಪ್ಪುವಿನ ಆಸ್ಥಾನವನ್ನು ಪ್ರವೇಶಿಸುವ ಕಳ್ಳಗಿಂಡಿಯನ್ನು ಮತ್ತು ಆತನ ಸೇನಾ ರಹಸ್ಯವನ್ನು ಎಲ್ಲವನ್ನು ಬ್ರಿಟೀಷರಿಗೆ ಹೇಳಿಬಿಡುತ್ತಾನೆ . ತನ್ನನ್ನು ಸಲಹಿದ , ಅನ್ನ-ಆಶ್ರಯ ಕೊಟ್ಟ ದೇವರಾದ ಟೀಪ್ಪುವನ್ನು ವಿನಾಶದಂಚಿಗೆ ತಂದ ಅಪಕೀರ್ತಿ ಇದೇ ಪೂರ್ಣಯ್ಯನಿಗೆ ಸಲ್ಲುತ್ತದೆ . ಕರ್ನಲ್ ವೆಲೆಸ್ಲಿ ಟಿಪ್ಪುವನ್ನು ಕೊಂದುಹಾಕುವಾಗ ಪೂರ್ಣಯ್ಯ ಗಹಗಹಿಸಿ ನಗುತ್ತಿದ್ದ . ಮುಂದೇ ಇದೇ ಪೂರ್ಣಯ್ಯ ಬ್ರ್‍ಇಟಿಷರು ಶರಣಾಗುತ್ತೀರಾ ಎಂದು ಕೇಳಿದಾಗ " ಅಯ್ಯೋ ದೇವರೆ ನೀವು ನಮ್ಮನು ಕಾಶಿ ಮತ್ತು ರಾಮೇಶ್ವರವನ್ನು ಕಾಯುತ್ತಿರುವವರು , ಖಂಡಿತ ಶರಣಾಗುತ್ತೇನೆ ಎಂದು ನುಡಿತ ಹೇಡಿ ಈ ಪೂರ್ಣಯ್ಯ. ಇಂತಹ ದೇಶದ್ರೋಹಿ ಪೂರ್ಣಯ್ಯನನ್ನು ಇತಿಹಾಸಕಾರರು ಬಿಂಬಿಸಿದ ರೀತಿ ಬಹಳ ಶೋಚನೀಯ . ನಮ್ಮ ಗೊಡ್ಡು ಇತಿಹಾಸಕಾರರು ಬ್ರಿಟೀಷರನ್ನು ನಾಡಿನಿಂದ ಒಡಿಸಲು ರಹಸ್ಯ ರೇಷ್ಮೆ ಪತ್ರ ಬರೆದು ಕಾರ್ಯಾಚರಣೆಮಾಡಿದ ಮೌಲ್ವಿಗಳನ್ನು ಶ್ಲಾಘಿಸುವುದಿಲ್ಲ ಬದಲಾಗಿ ತನ್ನ ಪವಿತ್ರ ಜನಿವಾರದಿಂದ ಆಶ್ರಯ ಕೊಟ್ಟ ದಣಿಯನ್ನೆ ನೇಣುಬಿಗಿದ ಪೂರ್ಣಯ್ಯನಂಥವನನ್ನು ಶ್ಲಾಗಿಸುತ್ತಾರೆ . ಪೂರ್ಣಯ್ಯ ನಮಗೆಲ್ಲ ನೀಚತನಕ್ಕೆ , ರಾಜದ್ರೋಹ ಪದಕ್ಕೆ ಪರ್ಯಾಯ ಪದವಾಗಲಿ.
No comments:
Post a Comment